ರೊಮೇನಿಯಾ ಮೂಲಕ ಉಕ್ರೇನ್‌ನಲ್ಲಿ ಸಿಲುಕಿದ್ದ ಇಬ್ಬರು ಉಡುಪಿ ವಿದ್ಯಾರ್ಥಿಗಳು ಭಾರತದತ್ತ

Update: 2022-02-27 10:00 GMT
ಸಾಂದರ್ಭಿಕ ಚಿತ್ರ (PTI)

ಉಡುಪಿ, ಫೆ.27 : ಯುದ್ಧಗ್ರಸ್ಥ ಉಕ್ರೇನ್‌ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆ‌ಗೆ ಸೇರಿದ ಒಟ್ಟು ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಇಬ್ಬರು ಇದೀಗ ರೊಮೇನಿಯಾ ಗಡಿಯ ಮೂಲಕ ಉಕ್ರೇನ್ ತೊರೆದಿದ್ದು, ಒಬ್ಬರು ವಿಮಾನದ ಮೂಲಕ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಜಿಲ್ಲಾಡಳಿತ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಇದರಂತೆ ಉದ್ಯಾವರ ಸಾಲ್ಮರದ ರಾಜೇಶ್ ಎಂಬವರ ಪುತ್ರ ಮೃಣಾಲ್ ಈಗಾಗಲೇ ರೊಮೇನಿಯಾ ತಲುಪಿದ್ದು ಅಲ್ಲಿಂದ ಹೊಸದಿಲ್ಲಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅವರು ಸಂಜೆ 6:00 ಗಂಟೆ ಸುಮಾರಿಗೆ ಹೊಸದಿಲ್ಲಿ ತಲುಪುವ ನಿರೀಕ್ಷೆ ಇದೆ.

ಹೊಸದಿಲ್ಲಿ ಕರ್ನಾಟಕ ಭವನದ ವ್ಯವಸ್ಥಾಪಕರಾಗಿರುವ ಪರ್ಕಳ ನಿವಾಸಿ ಬಿ ವಿ ರಾಘವೇಂದ್ರ ಅವರ ಪುತ್ರ ನಿಯಮ್ ರಾಘವೇಂದ್ರ ಸಹ ರೊಮೇನಿಯಾ ಗಡಿ ಮೂಲಕ ಉಕ್ರೇನ್ ತೊರೆದಿದ್ದು ಅಲ್ಲಿಂದ ಶೀಘ್ರವೇ ಭಾರತದತ್ತ ಪ್ರಯಾಣ ಬೆಳೆಸುವ ನಿರೀಕ್ಷೆ ಇದೆ.

ಇನ್ನುಳಿದ ಐವರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸುರಕ್ಷಿತವಾಗಿದ್ದು, ದೇಶ ತೊರೆಯುವ ಬಗ್ಗೆ ಮಾಹಿತಿಗಾಗಿ ಕಾಯುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News