ಯುವ ರೆಡ್‌ಕ್ರಾಸ್‌ನಿಂದ ಓರಿಯೆಂಟೇಶನ್ ಕಾರ್ಯಕ್ರಮ
Update: 2022-02-27 17:53 IST
ಮಂಗಳೂರು, ಫೆ.27: ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ವತಿಯಿಂದ ವಿದ್ಯಾರ್ಥಿಗಳಿಗೆ ಒರಿಯೆಂಟೇಶನ್ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ದ.ಕ.ಜಿಲ್ಲಾ ಜೆಆರ್‌ಸಿ/ವೈಆರ್‌ಸಿ ಅಧ್ಯಕ್ಷ ಸಚೇತ್ ಸುವರ್ಣ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಯುವ ರೆಡಕ್ರಾಸ್ ಸಂಯೋಜಕ ಡಾ.ಮಹೇಶ್ ಕೆ.ಬಿ, ಪ್ರೊ.ನಯನಾ ಕುಮಾರಿ ಕೆ, ಪ್ರೊ.ರಘುಪತಿ ಉಪಸ್ಥಿತರಿದ್ದರು. ವೈಷ್ಣ ವಿ ಸ್ವಾಗತಿಸಿದರು. ರಿತೇಶ್ ವಂದಿಸಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.