ನೆಕ್ಕಿಲಾಡಿಯಲ್ಲಿ ರಸ್ತೆ ಅಪಘಾತ: ಯುವಕ ಮೃತ್ಯು
Update: 2022-02-27 23:32 IST
ಉಪ್ಪಿನಂಗಡಿ, ಫೆ.27: ಬೈಕ್‌ಗಳೆರಡು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿಯ 34 ನೆಕ್ಕಿಲಾಡಿಯಲ್ಲಿ ಇಂದು ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಮೃತರನ್ನು ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿ ನವಾಝ್ ಎಂದು ಗುರುತಿಸಲಾಗಿದೆ. ಸಹಸವಾರ ರಶೀದ್ ಹಾಗೂ ಇನ್ನೊಂದು ಬೈಕ್ ಸವಾರ ಸುರೇಶ್ ಎಂಬವರು ಗಾಯಗೊಂಡಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನವಾಝ್ ಕೆಲಸ ಬಿಟ್ಟು ಸ್ನೇಹಿತ ರಶೀದ್ ಜೊತೆ ಮನೆಗೆ ತೆರಳುತ್ತಿದ್ದಾಗ ಸುರೇಶ್ ಸಂಚರಿಸುತ್ತಿದ್ದ ಬೈಕ್ ನಡುವೆ ಅಪಘಾತ ನಡೆದಿದೆಯೆನ್ನಲಾಗಿದೆ. ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.