×
Ad

ಎಮ್.ಎನ್.ಜಿ.ಫೌಂಡೇಶನ್ ವತಿಯಿಂದ ಪುರುಷರ ಕಟ್ಟೆ ಮಸೀದಿಗೆ ಕೊಳವೆ ಬಾವಿ ನಿರ್ಮಾಣ

Update: 2022-02-28 13:06 IST

ಪುತ್ತೂರು: ಮುಕ್ವೆ ಸಮೀಪದ ನರಿಮೊಗರು ಪುರುಷರ ಕಟ್ಟೆ ಎಂಬಲ್ಲಿಯ ಹಿಮಾಯತುಲ್ ಇಸ್ಲಾಂ ಮಸೀದಿಗೆ ನೀರಿನ ಅಭಾವವಿದ್ದು, ಬೋರ್‌ವೆಲ್‌ನ ಅಗತ್ಯವಿದೆ ಎಂದು ಮನವಿ ಬಂದಾಗ ದಾನಿಯೊಬ್ಬರ ಸಹಕಾರದಿಂದ ಎಮ್.ಎನ್.ಜಿ.ಫೌಂಡೇಶನ್ ಮಸೀದಿಗೆ ಬೋರ್‌ವೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು.

ಇದು ಎಮ್ ಎನ್ ಜಿ ಸಂಸ್ಥೆಯ "ಮಸೀದಿಗೆ ನೀರು" ಯೋಜನೆಯಡಿಯಲ್ಲಿ ಸಂಸ್ಥೆ ನಿರ್ಮಿಸಿದ ನಾಲ್ಕನೇ ಬೋರ್ ವೆಲ್ ಆಗಿದೆ. ಈ‌ ಹಿಂದೆ ಬಂಟ್ವಾಳ ದಾಸರಗುಡ್ಡೆ ಜುಮಾ‌ ಮಸೀದಿ, ಅಸೈಗೋಳಿ ಜುಮಾ ಮಸೀದಿಗೆ ಹಾಗೂ ಸಜೀಪ ಬೊಳಮೆ ಜುಮಾ ಮಸೀದಿಗೆ ಬೋರ್ ವೆಲ್ ವ್ಯವಸ್ಥೆ ಮಾಡಿಕೊಟ್ಟದ್ದನ್ನು ಸ್ಮರಿಸಬಹುದಾಗಿದೆ.

ಈ ಸಂದರ್ಭದಲ್ಲಿ ಮಸೀದಿಯ ಧರ್ಮ ಗುರುಗಳು ಆದ ರಿಯಾಝ್ ಫೈಝಿ ಪಟ್ಟೆ ದುಆ‌ದೊಂದಿಗೆ ಚಾಲನೆ ನೀಡಿದರು. ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಗಣ್ಣಿ, ಉಪಾಧ್ಯಕ್ಷರಾದ ಪಿಬಿಕೆ ಮೊಹಮ್ಮದ್, ಕಾರ್ಯದರ್ಶಿ ಅಬೂಬಕ್ಕರ್ ಮಯಾಂಗಳ, ಸಮಿತಿ ಸದಸ್ಯರಾದ ಸಲೀಂ ಮಯಾಂಗಳ ಮತ್ತು ಇನ್ನಿತರ ಸಮಿತಿ ಸದಸ್ಯರುಗಳು ಹಾಗೂ ಎಮ್.ಎನ್.ಜಿ. ಫೌಂಡೇಶನ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಇಲ್ಯಾಸ್ ಮಂಗಳೂರು, ಪದಾಧಿಕಾರಿಗಳಾದ ಮನ್ಸೂರು ಬಿ.ಸಿ.ರೋಡ್, ಬಶೀರ್ ಪರ್ಲಡ್ಕ, ಸಿದ್ದೀಕ್ ಕೊಳಕೆ, ಖಲಂದರ್ ಬಜ್ಪೆ, ಶಿಹಾಬ್ ತಂಙಳ್, ಫೈಝಲ್ ಸಂತೋಷ್ ನಗರ, ಮೊಹಮ್ಮದ್, ಹನೀಫ್ ಸಜೀಪ, ಅಲಿ ಪುತ್ತೂರು, ನವಾಝ್ ಸಜೀಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News