ಮುಕ್ಕ ಬೀಚ್ ನಲ್ಲಿ ಸ್ವಚ್ಛತಾ ಅಭಿಯಾನ
ಸುರತ್ಕಲ್, ಫೆ.27: ಮಾರುತಿ ಸ್ಪೋರ್ಟ್ಸ್ ಕ್ಲಬ್ ಮುಕ್ಕ ಮತ್ತು ಮುಕ್ಕ ಪ್ರೊಟೀನ್ಸ್ ಲಿಮಿಟೆಡ್ ಸಹಯೋಗದಲ್ಲಿ ಮುಕ್ಕ ಬೀಚ್ ಸ್ವಚ್ಛತಾ ಅಭಿಯಾನವು ರವಿವಾರ ಮುಕ್ಕ ಬೀಚ್‌ನಲ್ಲಿ ನಡೆಯಿತು.
ಸ್ಥಳೀಯ ಕಾಪೋರೇಟರ್ ಶೋಭಾ ರಾಜೇಶ್, ಉದಯ ಸುವರ್ಣ ಮಾತಾಡಿ ಇಂತಹ ಕಾರ್ಯ ಚಟುವಟಿಕೆ ನಿರಂತರವಾಗಲಿ ಎಂದರು.
ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಭಾಸ್ಕರ ಪುತ್ರನ್, ದುರ್ಗಾ ಫ್ರೆಂಡ್ಸ್ ಮುಕ್ಕ ಅಧ್ಯಕ್ಷ ಗಿರೀಶ್ ಸುವರ್ಣ, ಮಿತ್ರಪಟ್ಣ ಮೊಗವೀರಸಭಾ ಅಧ್ಯಕ್ಷ ರವೀಂದ್ರ ಕರ್ಕೇರ, ಶಿವರಾಮ್ ಗುರಿಕಾರ, ನಂದಿನಿ ಕ್ರಿಕೆಟರ್ಸ್ ಅರಂದ್ ಇದರ ಅಧ್ಯಕ್ಷ ಪುರುಷೋತ್ತಮ ದೇವಾಡಿಗ, ಮಿತ್ರಪಟ್ಣ ಯುವಕ ವೃಂದ ಅಧ್ಯಕ್ಷ ಅರುಣ್ ಕುಮಾರ್, ಮಿತ್ರಪಟ್ಣ ಮಹಿಳಾ ಸಭಾದ ಅಧ್ಯಕ್ಷೆ ಕವಿತಾ ಶರತ್, ಶ್ರೀರಾಮ್ ಫ್ರೆಂಡ್ಸ್ ಅಧ್ಯಕ್ಷ ಸುನೀಲ್ ಸಾಲ್ಯಾನ್ ಹಾಗೂ ಮುಕ್ಕ ಪ್ರೊಟೀನ್ಸ್ ಲಿ. ವ್ಯವಸ್ಥಾಪಕ ನಿರ್ದೇಶಕರಾದ ಮುಹಮ್ಮದ್ ಆರಿಫ್, ಮುಹಮ್ಮದ್ ಹಾಸಿರ್, ಜಗನ್ನಾಥ ಶೆಟ್ಟಿ ಬಾಳ, ಉದಯ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಜಗನ್ನಾಥ ಕೋಟ್ಯಾನ್ ಸಸಿಹಿತ್ಲು ಅತಿಥಿಗಳನ್ನು ಸ್ವಾಗತಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.