×
Ad

ಮಂಗಳೂರು: ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಪತ್ತೆ

Update: 2022-02-28 21:14 IST
ದೃಶ್ಯಾಂತ್

ಮಂಗಳೂರು, ಫೆ.28: ರವಿವಾರ ನಾಪತ್ತೆಯಾಗಿದ್ದ ನಗರದ ಮಹಾಕಾಳಿಪಡ್ಪುವಿನ ದೃಶ್ಯಾಂತ್ (16) ಎಂಬ ಬಾಲಕನ ಮೃತದೇಹ ಹೊಯ್ಗೆಬಜಾರ್‌ ನೇತ್ರಾವತಿ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.

9ನೇ ತರಗತಿಯ ವಿದ್ಯಾರ್ಥಿ ದೃಶ್ಯಾಂತ್ ರವಿವಾರ ಮಹಾಕಾಳಿ ಪಡ್ಪು ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್‌ಗೆ ಹೋಗಿ ಅಲ್ಲಿ ಅಪರಾಹ್ನ 3.30ರವರೆಗೆ ಕಾಮೆಂಟ್ರಿ ಮಾಡುತ್ತಿದ್ದ. ಅನಂತರ ಆತ ಸ್ನೇಹಿತರ ಜತೆಗೆ ಅಲ್ಲಿಂದ ತೆರಳಿದ್ದ. ಬಳಿಕ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಾಕಾಳಿ ಪಡ್ಪುವಿನಲ್ಲಿ ವಾಸವಿರುವ ಆಶಾ ಮತ್ತು ಚೆನ್ನಪ್ಪ ದಂಪತಿಯ ಪುತ್ರ ದೃಶ್ಯಾಂತ್ ಪಾಂಡೇಶ್ವರದ ರೊಸಾರಿಯಾ ಸ್ಕೂಲ್‌ನ 9ನೆ ತರಗತಿ ವಿದ್ಯಾರ್ಥಿ. ಗೆಳೆಯರ ಬಳಿ ನಿನ್ನೆ ಪೋಷಕರು ತಮ್ಮ ಮಗನ ಬಗ್ಗೆ ವಿಚಾರಿಸಿದ್ದರು. ಗೊತ್ತಿಲ್ಲ ಎಂದ ಕಾರಣ ಪೋಷಕರು ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಸಂಜೆ ವೇಳೆಗೆ ಬಾಲಕನ ಮೃತದೇಹ ನದಿ ತೀರದಲ್ಲಿ ಪತ್ತೆಯಾಗಿದೆ. ಪ್ಯಾಂಟ್ ಹಾಕಿಕೊಂಡು ಹೋಗಿದ್ದ ಬಾಲಕ ಚಡ್ಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಬಗ್ಗೆ ಸಂಶಯ ಮೂಡಿದ್ದು, ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News