ಸಮಾಜವಾದಿ ಪಕ್ಷದ ಮತಗಟ್ಟೆ ಏಜೆಂಟ್ ಮೇಲೆ ಹಲ್ಲೆ ಪ್ರಕರಣ: ಮಾಜಿ ಸಚಿವ, ಇತರ 17 ಜನರ ವಿರುದ್ಧ ಪ್ರಕರಣ
ಪ್ರತಾಪಗಡ,ಫೆ.28: ಸಮಾಜವಾದಿ ಪಕ್ಷದ ಮತಗಟ್ಟೆ ಏಜೆಂಟ್‌ನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕುಂಡಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಉ.ಪ್ರದೇಶದ ಮಾಜಿ ಸಚಿವ ರಘುರಾಜ್ ಪ್ರತಾಪ ಸಿಂಗ್ ಅಲಿಯಾಸ್ ರಾಜಾ ಭೈಯ್ಯೆ ಮತ್ತು ಇತರ 17 ಜನರ ವಿರುದ್ಧ ಐಪಿಸಿ ಮತ್ತು ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಕುಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.27ರಂದು ಮತದಾನದ ದಿನ ಎಸ್ಪಿ ಅಭ್ಯರ್ಥಿ ಗುಲ್ಶನ್ ಯಾದವ್ ಪರ ಮತಗಟ್ಟೆ ಏಜಂಟ್ ರಾಕೇಶ ಕುಮಾರ ಪಾಸಿಗೆ ಟಿಂಕು ಸಿಂಗ್ ಎಂಬಾತ ದೂರವಾಣಿ ಕರೆ ಮಾಡಿ ತಾವು ಮತಗಟ್ಟೆಯನ್ನು ವಶಪಡಿಸಿಕೊಳ್ಳಲಿದ್ದು,ಅಲ್ಲಿಂದ ನಿರ್ಗಮಿಸುವಂತೆ ಸೂಚಿಸಿದ್ದ. ಬಳಿಕ ಜನಸತ್ತಾ ದಳ ಲೋಕತಾಂತ್ರಿಕ ಪಕ್ಷದ ನಾಯಕ ರಘುರಾಜ ಪ್ರತಾಪ್ ಮತ್ತು ಇತರರು ಮತಗಟ್ಟೆಗೆ ಬಂದು ಪಾಸಿಯನ್ನು ವಾಹನವೊಂದರಲ್ಲಿ ಬಲವಂತದಿಂದ ಕರೆದೊಯ್ದು ಥಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಎಸ್ಪಿ ಸತ್ಪಾಲ್ ಅಂಟಿಲ್ ಹೇಳಿದರು.
ಹಲ್ಲೆಯಿಂದ ಪಾಸಿ ತಲೆಗೆ ಗಾಯವಾಗಿದೆ.