ರಶ್ಯಾ ವಿರುದ್ಧ ಬ್ಯಾಂಕಿಂಗ್ ನಿರ್ಬಂಧ ವಿಧಿಸಿದ ಬ್ರಿಟನ್

Update: 2022-02-28 18:49 GMT

ಲಂಡನ್, ಫೆ.28: ರಶ್ಯಾದ ಕೇಂದ್ರ ಬ್ಯಾಂಕ್ ಅನ್ನು ಗುರಿಯಾಗಿಸಿಕೊಂಡು, ರಶ್ಯಾದ ಮೇಲೆ ಇನ್ನಷ್ಟು ಆರ್ಥಿಕ ನಿರ್ಬಂಧ ಜಾರಿಗೊಳಿಸುವುದಾಗಿ ಬ್ರಿಟನ್ನ ವಿತ್ತ ಸಚಿವ ರಿಷಿ ಸುನಾಕ್ ಸೋಮವಾರ ಘೋಷಿಸಿದ್ದಾರೆ.

ಉಕ್ರೇನ್ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ರಶ್ಯಾದ ಮೇಲೆ ಇನ್ನಷ್ಟು ಆರ್ಥಿಕ ನಿರ್ಬಂಧ ವಿಧಿಸುವ ಬಗ್ಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ನ ಸಲಹೆ ಪಡೆದು, ಸೆಂಟ್ರಲ್ ಬ್ಯಾಂಕ್ ಆಫ್ ದಿ ರಶ್ಯನ್ ಫೆಡರೇಷನ್(ಸಿಬಿಆರ್) ವಿರುದ್ಧ ಬ್ಯಾಂಕಿಂಗ್ ನಿರ್ಬಂಧ ಜಾರಿಗೆ ನಿರ್ಧರಿಸಲಾಗಿದೆ. ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಕೈಗೊಂಡಿರುವ ಕ್ರಮಕ್ಕೆ ಪೂರಕವಾಗಿ ನಿರ್ಬಂಧ ಜಾರಿಯಾಗಲಿದೆ. ಪಾಶ್ಚಿಮಾತ್ಯ ದೇಶಗಳು ವಿಧಿಸಿದ ನಿರ್ಬಂಧದ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ಬ್ರಿಟನ್‌ನ ಶಾಖೆಯಲ್ಲಿ ತನ್ನ ವಿದೇಶ ವಿನಿಮಯ ಮೀಸಲು ನಿಧಿಯನ್ನು ಜಮೆಗೊಳಿಸುವ , ಮತ್ತು ರಶ್ಯಾದ ಕರೆನ್ಸಿ ರೂಬಲ್ಗೆ ಬೆಂಬಲವಾಗಿ ವಿದೇಶ ವಿನಿಮಯ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಸಿಬಿಆರ್ ಪ್ರಯತ್ನಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಿಷಿ ಸುನಾಕ್ ಹೇಳಿದ್ದಾರೆ.
ಯೋಜನೆಯ ಪ್ರಕಾರ, ಬ್ರಿಟನ್ ನಿವಾಸಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಸಿಬಿಆರ್ನೊಂದಿಗೆ ಮತ್ತು ರಶ್ಯಾದ ವಿತ್ತ ಇಲಾಖೆಯೊಂದಿಗೆ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗುವುದು. ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ರಶ್ಯಾದ ಮೇಲೆ ತೀವ್ರ ಆರ್ಥಿಕ ನಿರ್ಬಂಧ ಜಾರಿಗೊಳಿಸುವ ನಮ್ಮ ದೃಢ ನಿಲುವನ್ನು ಈ ಕ್ರಮಗಳು ಸಮರ್ಥಿಸುತ್ತವೆ. ನಮ್ಮ ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಮಿತ್ರರಾಷ್ಟ್ರಗಳೊಂದಿಗೆ ಕ್ಷಿಪ್ರ ಸಮನ್ವಯದಲ್ಲಿ ಈ ಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಬಿಕ್ಕಟ್ಟು ಅಂತ್ಯಗೊಳ್ಳುವವರೆಗೆ ರಶ್ಯಾವನ್ನು ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಿಂದ ದೂರ ಇರಿಸುವ ಮತ್ತು ಉಕ್ರೇನ್ ಮೇಲಿನ ಆಕ್ರಮಣಕ್ಕೆ ಆ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬ ನಮ್ಮ ಮುನ್ನೆಚ್ಚರಿಕೆಯಂತೆ ಈ ಕ್ರಮ ಜಾರಿಗೆ ಬರುತ್ತದೆ ಎಂದು ಭಾರತೀಯ ಮೂಲದ ವಿತ್ತಸಚಿವ ಸುನಾಕ್ ಹೇಳಿದ್ದಾರೆ.
ಸಿಬಿಆರ್, ರಶ್ಯಾ ರಾಷ್ಟ್ರೀಯ ಸಂಪತ್ತು ನಿಧಿ ಹಾಗೂ ವಿತ್ತ ಸಚಿವಾಲಯದ ವಿರುದ್ಧದ ನಿಷೇಧವನ್ನು ಜಾರಿಗೊಳಿಸಲು ತಕ್ಷಣವೇ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬ್ರಿಟನ್ ಸರಕಾರ ಹೇಳಿದೆ. ರಶ್ಯಾದ ಆಕ್ರಮಣದ ವಿರುದ್ಧ ಸರಕಾರದ ಪ್ರತಿಕ್ರಿಯೆಯನ್ನು ಬೆಂಬಲಿಸುವ ಯಾವುದೇ ಮತ್ತು ಎಲ್ಲಾ ಕ್ರಮಗಳನ್ನೂ ಬ್ಯಾಂಕ್ ಆಫ್ ಇಂಗ್ಲಂಡ್ ಕೈಗೊಳ್ಳಲಿದೆ ಎಂದು ಬ್ಯಾಂಕ್‌ನ ಗವರ್ನರ್ ಆ್ಯಂಡ್ರ್ಯೂ ಬೈಲಿ ಹೇಳಿದ್ದಾರೆ. ಈ ವಾರ ಮತ್ತಷ್ಟು ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು ಮತ್ತು ರಶ್ಯಾದ ಆರ್ಥಿಕ ಸಂಸ್ಥೆಗಳೂ ನಿಷೇಧದ ವ್ಯಾಪ್ತಿಗೆ ಸೇರಲಿವೆ. ಬ್ರಿಟನ್ ಆರ್ಥಿಕ ಮಾರುಕಟ್ಟೆಯಲ್ಲಿ ವರ್ಗಾವಣೆ ಮಾಡಬಹುದಾದ ಶೇರು ಹಾಗೂ ಸೆಕ್ಯುರಿಟೀಸ್, ಇತರ ಹಣಕಾಸಿನ ವ್ಯವಹಾರವನ್ನು ನಿಷೇಧಿಸಲಾಗುವುದು. ಬ್ರಿಟನ್ನಲ್ಲಿ ಸೊವರಿನ್ ಬಾಂಡ್ ಸಾಲ(ಸರಕಾರ ಭದ್ರತೆ ನೀಡುವ ಸಾಲ) ಪಡೆಯುವ ರಶ್ಯಾದ ಉಪಕ್ರಮಗಳಿಗೆ ಈಗಾಗಲೇ ತಡೆನೀಡಲಾಗಿದೆ. ಅಲ್ಲದೆ ರಶ್ಯಾದ ನಿರ್ಧಿಷ್ಟ ಬ್ಯಾಂಕ್ ಗಳು ಬ್ರಿಟನ್‌ ನ ಮೂಲಕ ಪೌಂಡ್ ಸ್ಟರ್ಲಿಂಗ್ ಮತ್ತು ಕ್ಲಿಯರಿಂಗ್ ವ್ಯವಹಾರ ನಡೆಸುವುದನ್ನೂ ನಿಷೇಧಿಸಲಾಗಿದೆ.

ಇಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಉಕ್ರೇನ್ ನಿಂದ್ಷಯಾನ ನಿರ್ಬಂಧ  ಸಂಬಂಧಿಸಿದ ಅತ್ಯಾಧುನಿಕ ಮತ್ತು ಮಹತ್ವದ ತಾಂತ್ರಿಕ ಉಪಕರಣ ಮತ್ತು ಘಟಕಗಳ ರಫ್ತಿಗೆ ನಿಷೇಧ ಸಹಿತ ರಶ್ಯಾದ ವಿರುದ್ಧ ಜಾರಿಗೊಳಿಸಿರುವ ವ್ಯಾಪಾರ ನಿರ್ಬಂಧಗಳಿಗೆ ಈ ಉಪಕ್ರಮ ಪೂರಕವಾಗಿದೆ. ಜತೆಗೆ ಉಕ್ರೇನ್ನಿಂದ ರಶ್ಯಾ ಈ ಹಿಂದೆಯೇ ವಶಕ್ಕೆ ಪಡೆದಿರುವ ಕ್ರಿಮಿಯಾ ಹಾಗೂ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ಉಕ್ರೇನ್ನ 2 ಪ್ರಾಂತಗಳ ವಿರುದ್ಧವೂ ಬ್ರಿಟನ್ ಆರ್ಥಿಕ ಮತ್ತು ವ್ಯಾಪಾರ ನಿರ್ಬಂಧ ಜಾರಿಗೊಳಿಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News