ಉಳ್ಳಾಲ ದರ್ಗಾಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭೇಟಿ
Update: 2022-03-02 16:54 IST
ಉಳ್ಳಾಲ : ಉಳ್ಳಾಲ ದರ್ಗಾದ ಉರೂಸ್ ಸಮಾರಂಭದಲ್ಲಿ ಸ್ವಯಂ ಪ್ರೇರಿತನಾಗಿ ಪಾಲ್ಗೊಳ್ಳುವುದನ್ನು ನಾನು ರೂಢಿಸಿಕೊಂಡು ಬಂದಿದ್ದೇನೆ. ಆಧ್ಯಾತ್ಮಿಕ ತೃಪ್ತಿ ನೀಡುವ ಉಳ್ಳಾಲ ದರ್ಗಾದ ಸಾಮಿಪ್ಯ ಹಿತವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಉಳ್ಳಾಲ ದರ್ಗಾದಲ್ಲಿ ಪ್ರಾರ್ಥನೆ ನಡೆಸಿ, ದರ್ಗಾ ಆಡಳಿತ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮತ್ತು ಉಪಾಧ್ಯಕ್ಷ ಯು.ಕೆ.ಮೋನು, ಪ್ರಧಾನ ಕಾರ್ಯದರ್ಶಿ ತ್ವಾಹ ಹಾಜಿ, ವಿನಯ ಕುಮಾರ್ ಸೊರಕೆಯವರನ್ನು ಶಾಲು ಹೊದಿಸಿ ಉಳ್ಳಾಲ ದರ್ಗಾ ಸಮಿತಿಯ ಪರವಾಗಿ ಸನ್ಮಾನಿಸಿದರು.
ಈ ಕಾರ್ಯಕ್ರಮ ದಲ್ಲಿ ಮುಸ್ತಫ ಅಬ್ದುಲ್ಲ, ಅಬ್ದುಲ್ ಜಬ್ಬಾರ್, ಸದಕತ್ತುಲ್ಲಾಹ್, ಹನೀಫ್ ಸುಭಾಷ್ ನಗರ ಮುಂತಾದವರು ಉಪಸ್ಥಿತರಿದ್ದರು.