×
Ad

ಯೂಸ್ಡ್ ವೆಹಿಕಲ್ ಡೀಲರ್ಸ್‌ನಿಂದ ವೈದ್ಯಕೀಯ ತಪಾಸಣೆ

Update: 2022-03-03 20:43 IST

ಮಂಗಳೂರು, ಮಾ.3: ದ.ಕ.ಜಿಲ್ಲಾ ಯೂಸ್ಡ್ ವೆಹಿಕಲ್ ಡೀಲರ್ಸ್‌ ಆ್ಯಂಡ್ ಏಜೆಂಟ್ಸ್ ಅಸೋಸಿಯೇಶನ್ (ರಿ) ಮಂಗಳೂರು ಇರ ವತಿಯಿಂದ ವೆಲ್‌ನೆಸ್ ಹೆಲ್ಪ್‌ಲೈನ್ ಮಂಗಳೂರು ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಭಾಗಿತ್ವದಲ್ಲಿ ಪಾಂಡೇಶ್ವರದ ಸರಕಾರಿ ಶಾಲೆಯಲ್ಲಿ ಇತ್ತೀಚೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು.

ಸಂಘದ ಅಧ್ಯಕ್ಷ ಜಯರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಕಾಂತ್ ಹೆಗ್ಡೆ ಶಿಬಿರ ಉದ್ಘಾಟಿಸಿ ದರು. ಅತಿಥಿಗಳಾಗಿ ವೆಲ್‌ನೆಸ್ ಹೆಲ್ಪ್‌ಲೈನ್‌ನ ವೈದ್ಯಕೀಯ ವಿಭಾಗದ ಅಧಿಕಾರಿ ಹನೀಫ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಕಾರ್ಪೊರೇಟರ್ ಅಬ್ದುಲ್ಲತೀಫ್, ಡಾ. ರಾಯ್ ಭಾಗವಹಿಸಿದ್ದರು.

ಸಂಘದ ಗೌರವಾಧ್ಯಕ್ಷ ಬಿ. ಅಶೋಕ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಪ್ರತಾಪ್ ಕೆ.ಎಸ್., ಕಾರ್ಯದರ್ಶಿ ಮುನೀರ್ ಅಹ್ಮದ್, ಸಂಘಟನಾ ಕಾರ್ಯದರ್ಶಿ ಅಬ್ದುಸ್ಸಲಾಂ, ಜೊತೆ ಕಾರ್ಯದರ್ಶಿ ಲಕ್ಷ್ಮಿಪ್ರಸಾದ್, ಹರ್ಷವರ್ಧನ್, ಮುಹಮ್ಮದ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News