ಬೆಂಗಳೂರಿನ ಸರಕಾರಿ ಕಟ್ಟಡಗಳಿಂದ 135 ಕೋಟಿಗೂ ಹೆಚ್ಚು ನೀರಿನ ಬಿಲ್ ಬಾಕಿ!

Update: 2022-03-03 18:15 GMT

ಬೆಂಗಳೂರು, ಮಾ.3: ನಗರ ವ್ಯಾಪ್ತಿಯಲ್ಲಿರುವ ಹಲವು ಸರಕಾರಿ ಕಟ್ಟಡಗಳಲ್ಲಿ ನೀರಿನ ಬಿಲ್ ಪಾವತಿ ಮಾಡದೆ, ಬಾಕಿ ಉಳಿಸಿರುವ ಗಂಭೀರ ಆರೋಪ ಕೇಳಿಬಂದಿದೆ.

ಕೇಂದ್ರ, ರಾಜ್ಯ ಸರಕಾರ, ಬಿಬಿಎಂಪಿ, ರೈಲ್ವೆ ಹಾಗೂ ರಕ್ಷಣಾ ಇಲಾಖೆಯವರು ಇದುವರೆಗೂ ಕೋಟ್ಯಂತರ ರೂ. ನೀರಿನ ಬಿಲ್ ಪಾವತಿಸಿಲ್ಲ. ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರುವ ಸರಕಾರಿ ಕಟ್ಟಡಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ.

ಜಲಮಂಡಳಿಗೆ ಸರಕಾರದ ವಿವಿಧ ಕಟ್ಟಡಗಳಿಂದ 135 ಕೋಟಿ ರೂ.ಗಳಿಗೂ ಹೆಚ್ಚು ನೀರಿನ ಬಿಲ್ ಬರಬೇಕಿದೆ. ನಗರದಲ್ಲಿರುವ ಕೇಂದ್ರ ಸರಕಾರದ 170 ಕಟ್ಟಡಗಳಿಂದ 2,17,98,165 ರೂ. ರಾಜ್ಯ ಸರಕಾರದ 542 ಕಟ್ಟಡಗಳಿಂದ 20,82,57,162, ಬಿಬಿಎಂಪಿಯ 497 ಕಟ್ಟಡಗಳಿಂದ 1,94,75,6800, ಸರಕಾರಿ ಸೌಮ್ಯದ 172 ಕಟ್ಟಡಗಳಿಂದ 7,51,16,150, ರಕ್ಷಣಾ ಇಲಾಖೆಯ 49 ಕಟ್ಟಡಗಳಿಂದ 21,84,13,278, ರೈಲ್ವೇ ಇಲಾಖೆಯ 23 ಕಟ್ಟಡಗಳಿಂದ 16,52,09,615 ಹಾಗೂ ಪೆÇಲೀಸ್ ಇಲಾಖೆಯ 163 ಕಟ್ಟಡಗಳಿಂದ 46,73,39,864 ರೂ.ಗಳು ಸೇರಿದಂತೆ ಒಟ್ಟು 135 ಕೋಟಿ ರೂ.ಗಳಿಗೂ ಹೆಚ್ಚು ನೀರಿನ ಬಿಲ್ ಪಾವತಿಯಾಗಬೇಕಿದೆ.

ಸರಕಾರಿ ಕಟ್ಟಡಗಳಿಂದ ಪಾವತಿಯಾಗಬೇಕಿರುವ 135 ಕೋಟಿ ರೂ. ನೀರಿನ ಬಿಲ್ ವಸೂಲಿಗೆ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ಮುಖ್ಯಇಂಂಜಿನಿಯರ್ ದೇವರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News