ಮುಕ್ಕ: ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡ ಅಸಿಸ್ಟೆಂಟ್ ಪ್ರೊಫೆಸರ್
Update: 2022-03-03 23:52 IST
ಮಂಗಳೂರು, ಮಾ.3: ಸುರತ್ಕಲ್ ಸಮೀಪದ ಎನ್ಐಟಿಕೆಯ ಅಸಿಸ್ಟೆಂಟ್ ಪ್ರೊಫೆಸರ್ ಮನೀಶ್ ಕುಮಾರ್ (36) ಎಂಬವರು ಬಾಡಿಗೆ ಮನೆಯ ಐದನೆ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಮೂಲತಃ ಉತ್ತರ ಪ್ರದೇಶ ಅಶೋಕ್ ಕುಮಾರ್ ಎಂಬವರ ಪುತ್ರನಾಗಿರುವ ಮನೀಶ್ ಕುಮಾರ್ ಬುಧವಾರ ಸಂಜೆ ಸುಮಾರು 5:30ಕ್ಕೆ ಮುಕ್ಕದ ಬಾಡಿಗೆ ಮನೆಯ ಐದನೆ ಮಹಡಿಯಲ್ಲಿ ಏರ್‌ಟೆಲ್ ಡಿಶ್ ಜೋಡಿಸುವ ವೇಳೆ ಆಯತಪ್ಪಿ ಫೈಬರ್ ಶೀಟ್‌ಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.