ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಸಂದಲ್ ಮೆರವಣಿಗೆ
Update: 2022-03-04 12:37 IST
ಉಳ್ಳಾಲ, ಕೋಟೆಪುರ ಹಾಗೂ ಕೋಡಿ ಮಸೀದಿ ಜಮಾಅತ್ ವತಿಯಿಂದ ಸೆಯ್ಯದ್ ಮದನಿ ದರ್ಗಾ ಉರೂಸ್ ಪ್ರಯುಕ್ತ ಸಂದಲ್ ಮೆರವಣಿಗೆ ಕಾರ್ಯಕ್ರಮ ಗುರುವಾರ ನಡೆಯಿತು.
16000 ಕೆಜಿ ಅಕ್ಕಿ ಹಾಗೂ 16 ಆಡುಗಳನ್ನೊಳಗೊಂಡ ಹೊರಕಾಣಿಕೆ ಸಂದಲ್ ಮೆರವಣಿಗೆಗೆ ಕೋಟೆಪುರ ಮಸೀದಿ ಖತೀಬ್ ಇರ್ಶಾದ್ ಅಹ್ಸನಿ ಚಾಲನೆ ನೀಡಿದರು.
ಕೋಟೆಪುರ ಮಸೀದಿ ಅಧ್ಯಕ್ಷ ಅಬ್ಬಾಸ್, ಕೋಡಿ ಮಸೀದಿ ಅಧ್ಯಕ್ಷ ಎ.ಆರ್ ಹಮೀದ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭ ಯು. ಹಸೈನಾರ್, ಯು ಕೆ ಅಬ್ಬಾಸ್ ಹಾಜಿ, ಯು.ಕೆ. ಹಮೀದ್ ಯೂಸುಫ್ ಸಹಿತ ಎರಡು ಮಸೀದಿಗಳ ಜಮಾಅತ್ ಸದಸ್ಯರು ಭಾಗವಹಿಸಿದ್ದರು.