×
Ad

542 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಚೆನ್ನೈ ಉದ್ಯಮಿ ಬಂಧಿಸಿದ ಈಡಿ

Update: 2022-03-05 15:23 IST

ಚೆನ್ನೈ: 542 ಕೋಟಿ ರೂಪಾಯಿ ಮೊತ್ತದ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚೆನ್ನೈ ಮೂಲದ ಕೋಸ್ಟಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ (ಸಿಇಪಿಎಲ್) ಪ್ರವರ್ತಕ ಅಹ್ಮದ್ ಎಆರ್ ಬುಹಾರಿ ಅವರನ್ನು ಜಾರಿ ನಿರ್ದೇಶನಾಲಯ(ಈಡಿ) ಬಂಧಿಸಿದೆ.

ಅಹ್ಮದ್ ಅವರು ಆಮದು ಮಾಡಿಕೊಂಡ ಕಲ್ಲಿದ್ದಲಿನ ಬೆಲೆ  ಹೆಚ್ಚಳ ಮಾಡಿ, ನಂತರ ಅದನ್ನು ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್‌ಯು) ಪೂರೈಸಲಾಗಿದೆ ಎಂದು ಈಡಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಕಲ್ಲಿದ್ದಲನ್ನು  ಸಿಇಪಿಎಲ್  ನಿಂದ ನೇರವಾಗಿ ಅಥವಾ ಮಿನರಲ್ಸ್ ಮತ್ತು ಮೆಟಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಂಎಂಟಿಸಿ) ಮೂಲಕ ಸರಬರಾಜು ಮಾಡಲ್ಪಟ್ಟಿದೆ, ಇದು ಕಡಿಮೆ ಕ್ಯಾಲೋರಿಫಿಕ್ ಮೌಲ್ಯವನ್ನು ಹೊಂದಿದೆ.

ಮಾದರಿ ಹಾಗೂ  ವಿಶ್ಲೇಷಣೆಯ (ಸಿಒಎಸ್ ಎ) ನಕಲಿ ಪ್ರಮಾಣಪತ್ರವನ್ನು ಸಲ್ಲಿಸುವ ಮೂಲಕ ಬುಹಾರಿ ಕಲ್ಲಿದ್ದಲಿನ ಗುಣಮಟ್ಟದ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ.

ಈ ಕೆಳದರ್ಜೆಯ ಕಲ್ಲಿದ್ದಲಿಗೆ ಅಧಿಕ ಬೆಲೆ ನೀಡಿ ಬುಹಾರಿ 548 ಕೋಟಿ ರೂ.ಗಳನ್ನು ಗಳಿಸಿದ್ದಾರೆ. ಯುಎಇಯಲ್ಲಿನ ಸಿಇಪಿಎಲ್ ಮತ್ತು ಸಿಎನ್‌ಒ ಗ್ರೂಪ್ ಘಟಕಗಳ ಮೂಲಕ ಹಣವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಈಡಿ ತನಿಖೆಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News