×
Ad

ಮಂಗಳೂರಿನ ಮೋತಿಮಹಲ್ ನಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಮಾರಾಟ

Update: 2022-03-05 18:07 IST

ಮಂಗಳೂರು, ಮಾ.5: ನಗರದ ಫಳ್ನೀರ್ ರಸ್ತೆಯಲ್ಲಿರುವ ಹೋಟೆಲ್ ಮೋತಿಮಹಲ್ನಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರಪ್ರತಿಷ್ಠಿತ ಬ್ರಾಂಡ್ಗಳ ಸಿದ್ಧ ಉಡುಪುಗಳ ಮಾರಾಟ ಮೇಳ ಆರಂಭಗೊಂಡಿದೆ.

ಈ ಮಾರಾಟ ಮೇಳದಲ್ಲಿ 50,000 ಮಿಕ್ಕಿ ವಿವಿಧ ಪ್ರಕಾರದ ಜಂಟ್ಸ್, ಲೇಡಿಸ್, ಕಿಡ್ಸ್ ಪ್ಯಾಂಟ್, ಟೀ-ಶರ್ಟ್, ಲೋವರ್, ಟಾಪ್, ಬರ್ಮುಡಾ, ಕಾಪ್ರಿ, ಪಲಾಜೊ ಕೇವಲ 200 ರೂ.ಯಿಂದ 350 ರೂ. ದರದಲ್ಲಿ ಲಭ್ಯವಿವೆ.

ಇಲ್ಲಿ ಬ್ರಾಂಡೆಡ್ ಕುರ್ತೀಸ್ ಮೇಳವನ್ನು ವಿಶೇಷವಾಗಿ ಮಹಿಳೆಯರಿಗೆ ಆಯೋಜಿಸಲಾಗಿದ್ದು ಪ್ರತಿಷ್ಠಿತ ಬ್ರಾಂಡ್ಗಳ ಕುರ್ತೀಸ್ 350 ರೂ.ನಿಂದ 500 ರೂ.ವರೆಗೆ ದೊರೆಯುತ್ತವೆ. ಪುರುಷರ ಪ್ರಮುಖ ಬ್ರಾಂಡ್ಗಳಾದ ಮಾರ್ಕ್ ಟೈಲರ್, ಆ್ಯರೋ, ಪೀಸ್ ಜೀನ್ಸ್, ಬ್ಲಾಕ್ಬೆರೀಸ್ ಲೀ, ನೆಟ್ಪ್ಲೇ ಇವುಗಳ ಶರ್ಟ್ಸ್, ಟೀ ಶರ್ಟ್ಸ್, ಪ್ಯಾಂಟ್ ಮತ್ತು ಫುಲ್ಓವರ್ ಇತ್ಯಾದಿ ಕೇವಲ 499 ರೂ.ನಿಂದ  999 ರೂ.ಗೆ ದೊರೆಯುತ್ತವೆ.

ಮಕ್ಕಳಿಗಾಗಿ 10 ಸಾವಿರಕ್ಕಿಂತಲೂ ಅಧಿಕ ಕಿಡ್ಸ್ ಗಾರ್ಮೆಂಟ್ಸ್ ಇಲ್ಲಿ ಪ್ರದರ್ಶಿತಗೊಳ್ಳುತ್ತಿದ್ದು ಹುಡುಗರ ಮತ್ತು ಹುಡುಗಿಯರ 1 ತಿಂಗಳಿನಿಂದ 12 ವರ್ಷದ ವಯೋಮಿತಿಯವರಿಗಾಗಿ ಟಾಪ್ಸ್, ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫ್ಯಾನ್ಸ್ ಫ್ರಾಕ್, ಫ್ಯಾನ್ಸಿ ಡ್ರೆಸ್, ಪುಲ್ಲೋವರ್, ಜಾಕೆಟ್ ಇತ್ಯಾದಿ 150 ರೂ.ಯಿಂದ 599 ರೂ.ಗೆ ಲಭ್ಯವಿದೆ. ರಾಜಸ್ತಾನಿ ರಾಯಲ್ ಪ್ರಿಂಟೆಡ್ ಬೆಡ್ಶೀಟ್, ಪಿಲ್ಲೋ ಕವರ್, ಸೋಫಾ ಕವರ್ ಇತ್ಯಾದಿಗಳ ವಿಫುಲ ಸಂಗ್ರಹವಿದೆ.

ಗ್ರಾಹಕರ ಅನುಕೂಲತೆಗಾಗಿ ಖರೀದಿಗೆ ಪ್ರಮುಖ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು, ಗೂಗಲ್ ಪೇ, ಫೋನ್ ಪೇ ಸ್ವೀಕರಿಸಲಾಗುತ್ತಿದೆ. ಮಧ್ಯಾಹ್ನ ಭೋಜನ ವಿರಾಮವಿಲ್ಲದೆ ನಿರಂತರ ಮಾರಾಟ ಮೇಳವು ಇರಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News