ಮಂಗಳೂರು: ಬೈಕ್ ಢಿಕ್ಕಿ; ಅಪರಿಚಿತ ಮೃತ್ಯು

Update: 2022-03-05 12:44 GMT

ಮಂಗಳೂರು, ಮಾ.5: ನಗರದ ಬಲ್ಮಠದ ಬಳಿ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿ ಮೃತಪಟ್ಟ ಘಟನೆ ಮಾ.3ರಂದು ನಡೆದಿದೆ.

ಬಲ್ಮಠ ಬಸ್ ನಿಲ್ದಾಣದ ಎದುರು ರಸ್ತೆ ದಾಟಲು ನಿಂತುಕೊಂಡಿದ್ದ ಸುಮಾರು 70 ವರ್ಷದ ವ್ಯಕ್ತಿಗೆ ಬೈಕ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಗಂಭೀರ ಗಾಯಗೊಂಡ ಅಪರಿಚಿತ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಮೃತದೇಹವನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಶವಾಗಾರದ ಶೈತ್ಯಾಗಾರದಲ್ಲಿರಿಸಲಾಗಿದೆ.

ಸುಮಾರು 5.6 ಅಡಿ ಎತ್ತರವಿರುವ, ಗೋಧಿ ಮೈಬಣ್ಣದ ಈ ವ್ಯಕ್ತಿಯು ದುಂಡು ಮುಖ, ಸಾಧಾರಣ ಶರೀರ, ಬಿಳಿ ತಲೆಕೂದಲು, ಉದ್ದವಾದ ಬಿಳಿ ಗಡ್ಡ ಹೊಂದಿದ್ದಾರೆ. ಎರಡೂ ಕೈಗಳಲ್ಲಿ ಹಿಂದಿ ಭಾಷೆಯಲ್ಲಿ ಅಚ್ಚೆ ಗುರುತು ಇದೆ. ಮಾಹಿತಿ ದೊರೆತವರು ಮಂಗಳೂರು ಸಂಚಾರ ಪೂರ್ವ ಠಾಣೆ (0824-2220523)ಯನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News