×
Ad

ಸಾವಿರ ಮಹಿಳೆಯರಿಗೆ 50 ಲಕ್ಷ ರೂ. ಮೊತ್ತದ ಆರೋಗ್ಯ ಸೇವೆ

Update: 2022-03-05 22:52 IST

ಉಡುಪಿ, ಮಾ.5: ಗುಂಡಿಬೈಲು ಧನ್ವಂತರಿ ಆಯುರ್ವೇದ ಆಸ್ಪತ್ರೆ, ಆಯು ಸುರೆನ್ಸ್ ಹಾಗೂ ಶಿವಾನಿ ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಒಂದು ಸಾವಿರ ಮಹಿಳೆ ಯರಿಗೆ 50 ಲಕ್ಷ ರೂ. ಮೊತ್ತದ ಆರೋಗ್ಯ ಸೇವೆ ಒದಗಿಸುವ ವಿಶೇಷ ಕಾರ್ಯಕ್ರಮವನ್ನು ಆಸ್ಪತ್ರೆಯಲ್ಲಿ ಮಾ.8ರಂದು ಬೆಳಿಗ್ಗೆ 9ರಿಂದ ಸಂಜೆ 4 ರವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಆರೋಗ್ಯ ಕಾಡ್‌ನ್ನು ಮಹಿಳೆಯರಿಗೆ ಉಚಿತವಾಗಿ ನೀಡಲಾಗುವುದು. ಇದು ಒಂದು ವರ್ಷದವರೆಗೆ ಮಾನ್ಯತೆಯಲ್ಲಿರುತ್ತದೆ. ಒಂದು ಕ್ಲಿನಿಕ್ ಸಮಾ ಲೋಚನೆ, ಒಂದು ಗಣಕೀಕೃತ ನಾಡಿ ಪರೀಕ್ಷೆಯನ್ನು ಒಳಗೊಂಡಿರುವ ಐದು ಸಾವಿರ ಮೌಲ್ಯದ ಸೇವೆ ಇದಾಗಿದೆ. ಪರೀಕ್ಷಾ ವರದಿಯ ಆಧಾರದ ಮೇಲೆ ಉಚಿತ ಆಯುರ್ವೇದ ಪಂಚಕರ್ಮ ಚಿಕಿತ್ಸೆ, ವೈಯಕ್ತೀಕರಿಸಿದ ಆಹಾರ ಯೋಜನೆ, ಯೋಗ ಹಾಗೂ ಜೀವನ ಶೈಲಿ ಯೋಜನೆ ಸೇವೆ ದೊರಕಲಿದೆ ಎಂದು ಆಸ್ಪತ್ರೆಯ ಸಹಾಯಕ ನಿರ್ದೇಶಕಿ ಡಾ.ಗಾಯತ್ರಿ ಕಡಕೋಳ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಶಿವಾನಿ ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ಲ್ಯಾಬ್ ತನಿಖೆಗಳ ಮೇಲೆ ಶೇ.15ರಷ್ಟು ರಿಯಾಯಿತಿ ಕೂಪನ್ ಒದಗಿಸಲಾಗುವುದು. ಮಾ.8ರಿಂದ 13ರ ವರೆಗೆ ಪ್ರತಿದಿನ ಬೆಳಿಗ್ಗೆ 9ರಿಂದ 4 ರವರೆಗೆ ನೋಂದಣಿ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0820 2574 520 ಸಂಪರ್ಕಿಸ ಬಹುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶಿವಾನಂದ ನಾಯಕ್, ವೈದ್ಯೆ ಡಾ.ವೀಣಾಶ್ರೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News