×
Ad

ವಿಟ್ಲ: ಹೊರೈಝನ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Update: 2022-03-05 23:29 IST

ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಹೊರೈಝನ್ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲಾ ಸಂಚಾಲಕ ನೋಟರಿ ಅಬೂಬಕರ್, ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್ಯದರ್ಶಿ ಹನೀಫ್ ಎಂ.ಎ., ಮೇಲ್ವಿಚಾರಕ ವಿ.ಕೆ.ಎಂ.ಅಶ್ರಫ್, ಟ್ರಸ್ಟಿ ಸಿದ್ದೀಕ್ ಮಾಲಮೂಲೆ, ಮಸೀದಿಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬದ್ರಿಯಾ ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಮುಂತಾದವರು ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಆಯಿಷತ್ ರಿದಾ ಹಾಗೂ ಅಹಮದ್ ಅಝೀಮ್ ಅವರಿಗೆ ಚಿನ್ನದ ನಾಣ್ಯ ನೀಡಿ  ಸನ್ಮಾನಿಸಲಾಯಿತು

ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು ಹಾಗೂ ಗಾಯತ್ರಿ, ತರಗತಿ ಶಿಕ್ಷಕಿ ಹಿತಶ್ರೀ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಹವ್ವ ಹನನ್ ಸ್ವಾಗತಿಸಿ, ಸೈಫ್ ವಂದಿಸಿದರು. ತೌಫೀಕಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News