×
Ad

ಪಡುಬಿದ್ರಿಯಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ

Update: 2022-03-06 17:38 IST

ಪಡುಬಿದ್ರಿ: ಸಮಾಜ ಸೇವಾ ಮನೋಭಾವ ಉಳ್ಳವನಿಗೆ ಬದುಕಿನುದ್ದಕ್ಕೂ ಅಪಸ್ವರ ಸಹಜ. ಆದರೆ ಆತ  ಎಂದಿಗೂ ಎದೆಗುಂದಲಾರ ದಿಟ್ಟತನದಿಂದ ಆತ ಮುನ್ನಡೆಯಲು ಸಮಾಜ ಸೇವೆಯಿಂದ  ಮಾತ್ರ ಸಾಧ್ಯ  ಎಂದು  ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಅದ್ಯಕ್ಷರಾದ  ನಝೀರ್ ಹುಸೈನ್ ಹೇಳಿದರು.

ಅವರು ರವಿವಾರ ಪಡುಬಿದ್ರೆ ರಾಧಾ ಮಾರ್ಕೆಟ್‍ನಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ಪಡುಬಿದ್ರೆಯ ಮೊಯಿದಿನ್ ಯೂಸುಫ್ ಸ್ಮರಣಾರ್ಥ ಮುಹಮ್ಮದನ್ ಹೆಲ್ಪಿಂಗ್ ಹ್ಯಾಂಡ್ಸ್ ಪಡುಬಿದ್ರಿ, ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿ ಗುಡ್ಡ ಎಂ. ಜೆ. ಎಫ್. ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಇದರ ಆಶ್ರಯದಲ್ಲಿ ಕೆ. ಎಂ. ಸಿ. ಆಸ್ಪತ್ರೆ ರಕ್ತನಿಧಿ ಮಣಿಪಾಲ್ ಇವರ ಸಹಕಾರದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರದ  ಅದ್ಯಕ್ಷತೆ ವಹಿಸಿ ಮಾತನಾಡಿದರು. 

ಮಂಗಳೂರು ಕದ್ರಿಗುಡ್ಡ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ವಿಶು ಕುಮಾರ್, ಆಟೋ ಚಾಲಕ ಮಾಲಕ ಸಂಘದ ಅದ್ಯಕ್ಷ ಪ್ರಕಾಶ್ ಶೆಟ್ಟಿ, ಕೆಎಂಸಿ ಆಸ್ಪತ್ರೆ ವೈದ್ಯೆ ಡಾ.ಆಸ್ನಾ, ಯುನೈಟೆಡ್ ಎಂಪವರ್ ಅಸೋಸಿಯೇಷನ್ ಕಾರ್ಯದರ್ಶಿ ಸಯ್ಯದ್, ಕಾರು ಚಾಲಕ ಮಾಲಕ ಸಂಘದ  ಕಾರ್ಯದರ್ಶಿ ಕೌಸರ್, ಮರ್ಹೂಂ ಮೊಯಿದಿನ್ ಯೂಸುಫ್ ರವರ ತಂದೆ ಇಕ್ಬಾಲ್, ಪಡುಬಿದ್ರೆ ಗ್ರಾಮ ಪಂಚಾಯತ್ ಸದಸ್ಯೆ ಮುಬೀನ ಬೆಗಂ,  ರೋಟರಿ  ಕ್ಲಬ್ ಅದ್ಯಕ್ಷ ನಿಯಾಝ್, ಪಡುಬಿದ್ರೆ ಯೂತ್ ಫೌಂಡೇಶನ್ ಅದ್ಯಕ್ಷ  ಅಶ್ರಫ್, ಅನಿವಾಸಿ ಉದ್ಯಮಿ ಮುತ್ತಲಿ, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ  ಪ್ರಧಾನ ಕಾರ್ಯದರ್ಶಿ  ಸಫ್ವಾನ್ ಕಲಾಯಿ, ಕೋಶಾಧಿಕಾರಿ ಸತ್ತಾರ್  ಪುತ್ತೂರು, ರಕ್ತ ಪೂರೈಕೆ ಮುಖ್ಯಸ್ಥ ಮುಸ್ತಫಾ ಕೆ.ಸಿ.ರೋಡ್, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಸಂಚಾಲಕ ಶಂಸುದ್ದೀನ್ ಬಲ್ಕುಂಜೆ, ಸಂಸ್ಥೆಯ ಕಾರ್ಯ ನಿರ್ವಾಹಕ ಸಾಜನ್ ಮುಕ್ಕ ಉಪಸ್ಥಿತರಿದ್ದರು.

ಮುಹಮ್ಮದನ್  ಹೆಲ್ಪಿಂಗ್ ಹ್ಯಾಂಡ್ಸ್ ಅದ್ಯಕ್ಷರಾದ ನಝೀಬ್ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ 80 ಯುನಿಟ್‍ಗೂ ಅಧಿಕ ರಕ್ತವನ್ನು ಸಂಗ್ರಹಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News