×
Ad

ವಿಟಿಯು ವಾರ್ಷಿಕ ಪರೀಕ್ಷೆ: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ರ್ಯಾಂಕ್

Update: 2022-03-06 18:30 IST
ಅಭಿಷೇಕ್ ಬಿ.ಎಸ್. / ಜೆನ್ನಿಫರ್ ಕುಟಿನ್ಹೋ  / ಸ್ವಾತಿ ಕೆ.

ಮಂಗಳೂರು, ಮಾ.6: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು)ಯು ನಡೆಸಿದ 2020-21ನೆ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಮೂವರು ವಿದ್ಯಾರ್ಥಿಗಳಿಗೆ ರ್ಯಾಂಕ್ ಲಭಿಸಿದೆ.

ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ 9.54 ಸಿಜಿಪಿಎ ಯೊಂದಿಗೆ ಜೆನ್ನಿಫರ್ ಕುಟಿನ್ಹೋ 2ನೇ ರ್ಯಾಂಕ್, ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ 9.44 ಸಿಜಿಪಿಎ ಯೊಂದಿಗೆ ಅಭಿಷೇಕ್ ಬಿ.ಎಸ್. 4ನೇ ರ್ಯಾಂಕ್, ಇನ್‌ಫಾರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ 9.25 ಸಿಜಿಪಿಎ ಯೊಂದಿಗೆ ಸ್ವಾತಿ ಕೆ. 6ನೇ ರ್ಯಾಂಕ್ ಪಡೆದಿದ್ದಾರೆ ಎಂದು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಮಂಜುನಾಥ್ ಭಂಡಾರಿ, ಪ್ರಾಂಶುಪಾಲ ಡಾ. ರಾಜೇಶ್ ಎಸ್. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News