ಚೆರ್ನೋಬಿಲ್ ಅಣುಸ್ಥಾವರದಲ್ಲಿ ಉಕ್ರೇನ್ ‘ತುಚ್ಛ’ ಪರಮಾಣು ಬಾಂಬ್ ತಯಾರಿಸುತ್ತಿತ್ತು: ರಶ್ಯ ಆರೋಪ
ಮಾಸ್ಕೊ, ಮಾ.6: ಚೆರ್ನೋಬಿಲ್ ಅಣುಸ್ಥಾವರದಲ್ಲಿ ಪ್ಲುಟೋನಿಯಂ ಆಧಾರಿತ ತುಚ್ಛ ಪರಮಾಣು ಶಸ್ತ್ರಾಸ್ತ್ರ ತಯಾರಿಸುವುದಕ್ಕೆ ಉಕ್ರೇನ್ ಅತ್ಯಂತ ನಿಕಟದಲ್ಲಿತ್ತು ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ರಶ್ಯಾದ ಮಾಧ್ಯಮಗಳು ವರದಿ ಮಾಡಿವೆ.
2000ರಲ್ಲಿ ದುರಂತ ಸಂಭವಿಸಿದ ಬಳಿಕ ಮುಚ್ಚಲಾದ ಚೆರ್ನೋಬಿಲ್ ಅಣುಸ್ಥಾವರದಲ್ಲಿ ಉಕ್ರೇನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸುತ್ತಿತ್ತು ಎಂದು ರಶ್ಯಾದ ಉನ್ನತ ಅಧಿಕಾರಿಯೊಬ್ಬರ ಹೇಳಿಕೆಯನ್ನು ತಾಸ್, ಆರ್ಐಎ ಮತ್ತು ಇಂಟರ್‌ಫ್ಯಾಕ್ಸ್ ಸುದ್ಧಿಸಂಸ್ಥೆಗಳು ಉಲ್ಲೇಖಿಸಿವೆ. ಆದರೆ ಈ ಹೇಳಿಕೆಗೆ ಸೂಕ್ತ ಪುರಾವೆಗಳಿಲ್ಲ ಎಂದೂ ಮಾಧ್ಯಮಗಳು ವರದಿ ಮಾಡಿವೆ.
ಸೋವಿಯತ್ ಒಕ್ಕೂಟದ ತಂತ್ರಜ್ಞಾನ ಬಳಸಿ ತನ್ನದೇ ಆದ ಪರಮಾಣು ಶಸ್ತ್ರಾಸ್ತ್ರ ತಯಾರಿಸಿ ಆ ಮೂಲಕ ರಶ್ಯಾದ ಮೇಲೆ ದಾಳಿ ನಡೆಸಲು ಉಕ್ರೇನ್ ಸಂಚು ಹೂಡಿದೆ. ಉಕ್ರೇನ್ ಅನ್ನು ನಿಶಸ್ತ್ರೀಕರಿಸುವ ಉದ್ದೇಶದಿಂದ ಆ ದೇಶದ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಆದರೆ ಈ ಪ್ರತಿಪಾದನೆಯನ್ನು ನಿರಾಕರಿಸಿರುವ ಪಾಶ್ಚಿಮಾತ್ಯ ದೇಶಗಳು ರಶ್ಯಾ ವಿರುದ್ಧ ತೀವ್ರ ಆರ್ಥಿಕ ದಿಗ್ಬಂಧನ ವಿಧಿಸಿವೆ. 1984ರಲ್ಲಿ ಸೋವಿಯತ್ ಒಕ್ಕೂಟ ವಿಭಜನೆಗೊಂಡ ಬಳಿಕ ತಾನು ಪರಮಾಣು ಶಸ್ತ್ರಾಸ್ತ್ರ ಯೋಜನೆಯನ್ನು ಕೈಬಿಟ್ಟಿದ್ದು ಮತ್ತೆ ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶಗಳ ಬಣಕ್ಕೆ ಸೇರ್ಪಡೆಯಾಗುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಉಕ್ರೇನ್ ಸರಕಾರ ಸ್ಪಷ್ಟಪಡಿಸಿದೆ.
ರಶ್ಯಾ ಆಕ್ರಮಣ ವಿಫಲಗೊಳಿಸಲು ಅಂತರರಾಷ್ಟ್ರೀಯ ಕ್ರಿಯಾಯೋಜನೆ: ಬ್ರಿಟನ್
ಲಂಡನ್:ಉಕ್ರೇನ್ ಮೇಲಿನ ರಶ್ಯಾ ಅತಿಕ್ರಮಣವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕ್ರಿಯಾಯೋಜನೆಗೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಚಾಲನೆ ನೀಡಿದ್ದಾರೆ.ಇದರ ಅಂಗವಾಗಿ ಮುಂದಿನ ವಾರ ಸರಣಿ ರಾಜತಾಂತ್ರಿಕ ಸಭೆಗಳನ್ನು ಹಮ್ಮಿಕೊಂಡಿರುವುದಾಗಿ ಪ್ರಧಾನಿ ಕಚೇರಿ ಪ್ರಕಟಿಸಿದೆ.
ರಶ್ಯಾದ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸುವ ಸಲುವಾಗಿ ನವೀಕೃತ ಹಾಗೂ ನಿರಂತರ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಬೆಂಬಲವನ್ನು ಬ್ರಿಟನ್ ಪ್ರಧಾನಿ ಕೋರಲಿದ್ದಾರೆ.ಇದಕ್ಕಾಗಿ ಆರು ಅಂಶಗಳ ಕ್ರಿಯಾಯೋಜನೆಯನ್ನು ಜಾರಿಗೆ ತರಲಿದ್ದು,ಭಾನುವಾರ ಇದರ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೆಯಲ್ಲಿ ವಿವರಿಸಲಾಗಿದೆ.
"ರಶ್ಯಾ ಉಕ್ರೇನ್ ಮೇಲೆ ಅತಿಕ್ರಮಣ ಮಾಡಿದ ದಿನದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.ವಿಶ್ವಾದ್ಯಂತ ಹಲವು ದೇಶಗಳು ಈ ಪ್ರಮುಖ ಆರ್ಥಿಕತೆಯ ವಿರುದ್ಧ ಅತಿದೊಡ್ಡ ನಿರ್ಬಂಧಗಳನ್ನು ಹೇರಿವೆ ಎಂದು ಪ್ರಧಾನಿ ಕಚೇರಿ ವಿವರಿಸಿದೆ.
"ಈ ಅತಿಕ್ರಮಣದಲ್ಲಿ ರಶ್ಯಾ ಅಧ್ಯಕ್ಷರು ಸೋಲಬೇಕು ಅವರು ಸೋಲುವುದನ್ನು ಖಾತರಿಪಡಿಸಬೇಕುಎಂದು ಜಾನ್ಸನ್ ಹೇಳಿದ್ದಾರೆ. ನಿಯಮ ಆಧರಿತ ವ್ಯವಸ್ಥೆಗೆ ನಾವು ಕೇವಲ ಬೆಂಬಲ ವ್ಯಕ್ತಪಡಿಸಿದರೆ ಸಾಲದು; ಮಿಲಿಟರಿ ಬಲದ ಮೂಲಕ ಇದನ್ನು ಮರು ವ್ಯಾಖ್ಯಾನಿಸುವ ನಿರಂತರ ಪ್ರಯತ್ನಗಳ ವಿರುದ್ಧ ನಾವು ರಕ್ಷಿಸಬೇಕು
ಸೋಮವಾರ ಈ ಕಾರ್ಯತಂತ್ರದ ಭಾಗವಾಗಿ ಜಾನ್ಸನ್ ಅವರು ತಮ್ಮ ಕಚೇರಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇವ್ ಮತ್ತು ಹಾಲೆಂಡ್ ಪ್ರಧಾನಿ ಮಾರ್ಕ್ ರೂಟ್ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.ಉಕ್ರೇನ್ ಗೆ ಬೆಂಬಲ ನೀಡುವ ಅಭಿಯಾನವಾಗಿ ತಮ್ಮ ಬದ್ಧತೆಗಳನ್ನು ಹೇಗೆ ಪರಿವರ್ತಿಸಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಕಚೇರಿ ಸ್ಪಷ್ಟಪಡಿಸಿದೆ.
ಅಮೆರಿಕದ ಅಧ್ಯಕ್ಷ ಬೈಡನ್ ಜತೆ ಉಕ್ರೇನ್ ಅಧ್ಯಕ್ಷ ಮಹತ್ವದ ಮಾತುಕತೆ
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು,ಉಕ್ರೇನ್ ನ ಭದ್ರತೆ ಮತ್ತು ಹಣಕಾಸು ನೆರವು ನೀಡುವ ಸಂಬಂಧ ಮಹತ್ವದ ಚರ್ಚೆ ನಡೆಸಿದ್ದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಪ್ರಕಟಿಸಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಈ ಮಾತುಕತೆ ವಿಶೇಷ ಮಹತ್ವ ಪಡೆದಿದೆ.ರಷ್ಯಾ ವಿರುದ್ಧ ಅಮೆರಿಕ ಹೇರಿರುವ ನಿರ್ಬಂಧ ಮುಂದುವರಿಸುವಂತೆ ಉಕ್ರೇನ್ ಅಧ್ಯಕ್ಷರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.ನಿರಂತರ ಸಂವಾದದ ಅಂಗವಾಗಿ ಅಮೆರಿಕದ ಅಧ್ಯಕ್ಷರ ಜತೆ ಮತ್ತೊಂದು ಬಾರಿ ಚರ್ಚೆ ನಡೆಸಿದ್ದಾಗಿ ಝೆಲೆಂಸ್ಕಿ ಟ್ವೀಟ್ ಮಾಡಿದ್ದಾರೆ.
ಯುದ್ಧಪೀಡಿತ ಉಕ್ರೇನ್ಡ್ಜ್ಿಪ್ರಮುಖ ನಗರಗಳ ಮೇಲೆ ತಮ್ಮ ಪಡೆಗಳು ಹಿಡಿತ ಮುಂದುವರಿಸಿದ್ದು,10 ಕಳೆದ ಹತ್ತು ದಿನಗಳ ಯುದ್ಧದಲ್ಲಿ ರಷ್ಯನ್ ಸೇನೆಯ ಸಾವಿರ ಮಂದಿಯನ್ನು ಹತ್ಯೆ ಮಾಡಿರುವುದಾಗಿ ಝೆಲೆಂಸ್ಕಿ ಹೇಳಿಕೊಂಡಿದ್ದಾರೆ.
ಏತನ್ಮಧ್ಯೆ ಉಕ್ರೇನ್ ನ ಪ್ರಮುಖ ನಗರವಾದ ಮರಿಯೊಪೋಲ್ಡ್ ಮೇಯರ್ ಹೇಳಿಕೆ ನೀಡಿ, ರಷ್ಯಾ ನಗರಕ್ಕೆ ತಡೆ ಹಾಕಿದ್ದು, ಮಾನವೀಯ ಕಾರಿಡಾರ್ ತಡೆದಿದೆ ಎಂದು ಆಪಾದಿಸಿದ್ದಾರೆ.
ನಗರಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಮೇಯರ್ ವದೀಮ್ ಬೈಚೆಂಕೊ ದೂರಿದ್ದಾರೆ.ನಗರದ ನಾಲ್ಕು ಲಕ್ಷ ನಿವಾಸಿಗಳನ್ನು ರಶ್ಯಾನ್ನರು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾಗಿ ಕೀವ್ ಇಂಡಿಪೆಂಡೆಂಟ್ ವರದಿ ಮಾಡಿದೆ. ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮಾಧ್ಯಮ ನಿರ್ಬಂಧ ಕಾನೂನು ಜಾರಿಗೊಳಿಸಿರುವುದನ್ನು ಅಮೆರಿಕ ಕಟುವಾಗಿ ಟೀಕಿಸಿದೆ. ಮಾನವಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.