×
Ad

ಧರ್ಮಸ್ಥಳ: ಹತ್ಯೆಯಾದ ದಿನೇಶ್ ಕುಟುಂಬಕ್ಕೆ ಪರಿಹಾರಧನ ಬಿಡುಗಡೆ

Update: 2022-03-07 15:02 IST
ಕೊಲೆಯಾದ ದಿನೇಶ್

ಬೆಳ್ತಂಗಡಿ, ಮಾ.7: ಬಜರಂಗದಳದ ಕಾರ್ಯಕರ್ತ, ಬಿಜೆಪಿ ಮುಖಂಡ ಕೃಷ್ಣ ಧರ್ಮಸ್ಥಳ ಎಂಬಾತನಿಂದ ಹತ್ಯೆಗೊಳಗಾದ ಆದಿವಾಸಿ ಯುವಕ ಧರ್ಮಸ್ಥಳ ಗ್ರಾಮದ ಕನ್ಯಾಡಿ ದಿನೇಶ್ ಅವರ ಕುಟುಂಬಕ್ಕೆ ಪರಿಹಾರ ಧನವನ್ನು ಜಿಲ್ಲಾಡಳಿತ ಸೋಮವಾರ ಬಿಡುಗಡೆ ಮಾಡಿದೆ.

ಮೃತ ದಿನೇಶ್ ಅವರ ಪತ್ನಿ ಕವಿತಾ ದಿನೇಶ್ ಅವರ ಕೆನರಾ ಬ್ಯಾಂಕ್ ಖಾತೆಗೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಜಂಟಿ ಖಾತೆಯಿಂದ 4,12,500 ರೂ. ಜಮೆ ಮಾಡಲಾಗಿದೆ.

ಕಳೆದ ಫೆ.23ರಂದು ಕ್ಷುಲ್ಲಕ ಕಾರಣಕ್ಕೆ ದಿನೇಶ್ ಮೇಲೆ ಆರೋಪಿ ಕೃಷ್ಣ ಧರ್ಮಸ್ಥಳ ಸಾರ್ವಜನಿಕವಾಗಿ ಥಳಿಸಿ , ಗಂಭೀರ ಗಾಯಗೊಳಿಸಿದ್ದ ಆರೋಪ ಕೇಳಿಬಂದಿತ್ತು. ಹಲ್ಲೆಯಿಂದ ಗಂಭೀರಾವಸ್ಥೆಯಲ್ಲಿದ್ದ ದಿನೇಶ್ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.25ರಂದು ಮೃತಪಟ್ಟಿದ್ದರು. ಇದೀಗ 11 ದಿನಗಳ ಬಳಿಕ ಜಿಲ್ಲಾಡಳಿತ ಪರಿಹಾರ ಧನವನ್ನು ಸಂತ್ರಸ್ತ ಕುಟುಂಬಕ್ಕೆ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News