×
Ad

ಮಾ.12-13ರಂದು ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್ ಕ್ರೀಡಾಕೂಟ

Update: 2022-03-08 17:27 IST

ಉಡುಪಿ, ಮಾ.8: ಮಾಸ್ಟರ್ ಗೇಮ್ಸ್ ಅಸೋಸಿಯೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಕರ್ನಾಟಕ ಮಾಸ್ಟರ್ ಗೇಮ್ಸ್‌ನ ಸಹಯೋಗದಲ್ಲಿ 30ವರ್ಷ ಮೇಲ್ಪಟ್ಟವರ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಮಾ.12 ಮತ್ತು 13ರಂದು ಉಡುಪಿ ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಟೆನ್ನಿಸ್, ಟೇಬಲ್ ಟೆನ್ನಿಸ್, ವೈಟ್‌ಲಿಫ್ಟಿಂಗ್, ಈಜು, ಬಾಸ್ಕೆಟ್ ಬಾಲ್, ಕಬ್ಬಡಿ, ಹ್ಯಾಂಡ್‌ಬಾಲ್ ಮತ್ತು ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ. ಇದರಲ್ಲಿ ರಾಜ್ಯದ ಸುಮ್ಜಾರು 2000ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಲಿರುವರು ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷ ಮಹೇಶ್ ಠಾಕೂರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಕೂಟದ ಖರ್ಚು ಸುಮಾರು 25ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಛಿಸುವವರು ಮಾರ್ಚ್ 10ರೊಳಗೆ ಈ ಲಿಂಕ್ ಮೂಲಕ ನೋಂದಾಣಿ ಮಾಡಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಕಾಶೀರಾಮ್ ಪೈ, ಕೋಶಾಧಿಕಾರಿ ದಯಾನಂದ ಕಲ್ಮಾಡಿ, ಹಿರಿಯ ಕಾರ್ಯದರ್ಶಿ ಶಾಲಿನಿ ಶೆಟ್ಟಿ, ಸದಸ್ಯ ಅರುಣ್ ಶೇರಿಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News