×
Ad

‘ಮೇ ಲಡ್ಕೀ ಹೂಂ, ಲಡ್ ಸಕ್ತೀ ಹುಂ’; ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಸ್ವ ಉದ್ಯೋಗ ಪ್ರದರ್ಶನ- ಮಾರಾಟ

Update: 2022-03-08 18:14 IST

ಮಂಗಳೂರು, ಮಾ. 8: ಮಹಿಳಾ ದಿನಾಚರಣೆ ಅಂಗವಾಗಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ‘ಮೇ ಲಡ್ಕೀ ಹೂಂ, ಲಡ್ ಸಕ್ತೀ ಹುಂ’ ಘೋಷಣೆಯಡಿ ಮಹಿಳಾ ಉದ್ಯಮಿಗಳ ಸ್ವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಯಿತು.

ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಸುರೇಖ ಚಂದ್ರಹಾಸ್,ಮಲ್ಲಿಕ ಪಕ್ಕಳ, ಶೋಭಾ ಕೇಶವ್, ಶಶಿಕಲಾ,ಗೀತಾ ಅತ್ತಾವರ, ಶಾಂತಲ ಗಟ್ಟಿ, ಚಂದ್ರಕಲಾ, ನಮಿತಾ ಡಿ ರಾವ್, ಸಬಿತಾ ಮಿಸ್ಕಿತ್, ನಂದಾ ಪಾಯಸ್,ಜೆಸಿಂತಾ ಆಲ್ಫ್ರೆಡ್,ಚಂದ್ರಿಕಾ ರೈ,ತನ್ವೀರ್ ಶಾ, ಸೌಮ್ಯಲತಾ, ಸಂಜನಾ ಛಲವಾದಿ, ಪೃಥ್ವಿ ಕೋಟ್ಯಾನ್, ಸುನಿತಾ, ವೃಂದಾ ಪೂಜಾರಿ, ಲವಿಲಾ ಮೋರಾ, ಎಸ್.ಕೆ ಸುಮಯ್ಯ ಉಪಸ್ಥಿತರಿದ್ದರು.

ವಸ್ತು ಪ್ರದರ್ಶನ ಮತುತಿ ಮಾರಾಟ ಮಳಿಗೆಯಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿಯಿಂದ ತೊಡಗಿ ಕರಾವಳಿಯ ಗೋಡಂಬಿ ಜ್ಯೂಸ್, ಆರೋಗ್ಯ ಉತ್ತಮಗೊಳಿಸುವ ಸಾವಯವ ಉತ್ಪನ್ನಗಳು, ಮಹಿಳೆಯರ ಶೃಂಗಾರ ಸಾಧನೆಗಳು, ಮನೆಯಲ್ಲೆ ತಯಾರಿಸಲಾದ ಸಿದ್ಧ ಉಡುಪು, ವಿವಿಧ ಮಸಾಲೆ ಉತ್ಪನ್ನಗಳು, ಮಹಿಳೆಯರು ನಡೆಸುವ ನೇರ ಮಾರುಕಟ್ಟೆ ಕಂಪೆನಿಯ ಪ್ರಾಡಕ್ಟ್ ಸೇರಿದಂತೆ 50ಕ್ಕೂ ಅಧಿಕ ಸ್ಟಾಲ್‌ಗಳಿದ್ದವು. ಮಂಗಳೂರಿನ ಹವ್ಯಾಸಿ ಚಿತ್ರಕಲಾವಿದೆ ಮನಾಲಿ ಅವರು ಸ್ಪಾಟ್ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು.

ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಹಿಳಾ ಉದ್ಯಮಿಗಳಿಗೆ, ಕಾರ್ಯಕರ್ತರಿಗೆ ಶುಭ ಹಾರೈಸಿದರು. ಉತತಿರ ಕರ್ನಾಟಕ ಶೈಲಿಯ ಪಾಯಸ ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News