×
Ad

ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮಹಿಳಾ ಸಾಧಕಿಯರಿಗೆ ಪ್ರಶಸ್ತಿ

Update: 2022-03-08 20:31 IST

ಮಂಗಳೂರು, ಮಾ.8: ಮಹಿಳಾ ದಿನಾಚರಣೆ ಅಂಗವಾಗಿ ಕೊಡಿಯಾಲ್‌ಬೈಲ್ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಮೂವರು ಮಹಿಳಾ ಸಾಧಕಿಯರಿಗೆ ವುಮನ್ ಆಫ್ ಸಬ್‌ಸ್ಟೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆ್ಯಂಬುಲೆನ್ಸ್ ಚಾಲಕರಾಗಿದ್ದ ಪತಿಯ ನಿಧನದ ಬಳಿಕ ಆ್ಯಂಬುಲೆನ್ಸ್ ಚಾಲಕಿಯಾಗಿ ದುಡಿದು, ಪ್ರಸ್ತುತ ಕಾವೇರಿ ಆ್ಯಂಬುಲೆನ್ಸ್ ಸೇವೆಯ ಮೂಲಕ ಪರಿಚಿತರವಾಗಿರುವ ಸಿ. ಎಸ್. ರಾಧಿಕಾ ಏಡ್ಸ್ ಪೀಡಿತ ಹೆಣ್ಣು ಮಕ್ಕಳಿಗಾಗಿ ಸಂಸ್ಥೆಯನ್ನು ನಿರ್ವಹಿಸುತ್ತಿರುವ ತಬಸ್ಸುಮ್ ಮತ್ತು ಶಿಕ್ಷಣ ತಜ್ಞೆ ಹಾಗೂ ಸಮಾಜ ಸೇವಕಿ ಪ್ರೊ. ಮರಿಯಾ ಡಿಕೋಸ್ಟಾ ಅವರನ್ನು ಇಂದು ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಯೆನೆಪೋಯ ಅಬ್ದುಲ್ಲಾ ಜಾವೇದ್ (ಕಾರ್ಯ ನಿರ್ವಾಹಕ) , ಡಾ. ಮುಹಮ್ಮದ್ ತಾಹೀರ್ (ವೈದ್ಯಕೀಯ), ಆಸ್ಪತ್ರೆಯ ಪ್ರಮುಖ ವೈದ್ಯರಾದ ಡಾ. ಅಶ್ವಿನಿ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಾಧಕಿಯರನ್ನು ಸನ್ಮಾನಿಸಿ, ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News