×
Ad

ಆದಿತ್ಯನಾಥ್‌ ಗೆಲುವಿಗೆ ಜೋಗಿ ಮಠದಲ್ಲಿ ಸಂಭ್ರಮ

Update: 2022-03-10 23:00 IST

ಮಂಗಳೂರು, ಮಾ.10: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಆದಿತ್ಯನಾಥ್‌ಗೂ ಮಂಗಳೂರಿಗೂ ಅವಿನಾಭಾವ ಸಂಬಂಧವಿರುವ ಹಿನ್ನೆಲೆಯಲ್ಲಿ ಕದ್ರಿಯ ಕದಳಿ ಶ್ರೀ ಯೋಗೇಶ್ವರ (ಜೋಗಿ) ಮಠದಲ್ಲಿ ಗುರುವಾರ ಸಂಭ್ರಮಾಚರಿಸಲಾಯಿತು.

ಉತ್ತರ ಪ್ರದೇಶದ ಮಗೋರಖ್‌ಪುರದಿಂದ ಸುಮಾರು 2,000 ಕಿಮೀ ದೂರದಲ್ಲಿರುವ ಮಂಗಳೂರಿನ ಜೋಗಿ ಮಠಕ್ಕೆ ಯೋಗಿಯವರು ಮಹಾಂತರಾಗಿ, ಸಂಸದರಾಗಿ, ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಇಲ್ಲಿಯ ತನಕ ಆರು ಸಲ ಭೇಟಿ ನೀಡಿದ್ದಾರೆ. ಕರ್ನಾಟಕಕ್ಕೆ ಭೇಟಿ ನೀಡಿದಾಗ ಪ್ರತೀ ಸಂದರ್ಭದಲ್ಲೂ ಅವರು ಜೋಗಿ ಮಠಕ್ಕೆ ಭೇಟಿ ನೀಡುತ್ತಾರೆ.

ಆದಿತ್ಯನಾಥ್‌ ಗೆದ್ದು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ಜೋಗಿ ಮಠದಲ್ಲಿ ಸಂಭ್ರಮ ಕಂಡು ಬಂತು. ಯೋಗಿ ನಿರ್ಮಲನಾಥ್ ಸೇರಿದಂತೆ ಜೋಗಿ ಸಮುದಾಯದವರು ಯೋಗಿ ಗೆಲುವನ್ನು ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News