ಮಾ.12-13: ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆ

Update: 2022-03-10 17:33 GMT

ಮಂಗಳೂರು : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಪರೀಕ್ಷಾ ಬೋರ್ಡಿನ ಅಧೀನದಲ್ಲಿ ನಡೆಯುವ ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳ ಮದ್ರಸ ಪಬ್ಲಿಕ್ ಪರೀಕ್ಷೆಗಳು ಮಾ.12 ಮತ್ತು 13ರಂದು ನಡೆಯಲಿದೆ.

ಈ ವರ್ಷ 7,455 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ದೇಶ-ವಿದೇಶಗಳ ಸಮಸ್ತ ಅಂಗೀಕೃತ 10,459 ಮದ್ರಸಗಳ 2,61,333 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ದ.ಕ.ಲ್ಲೆಯನ್ನು ಮುಲ್ಕಿ, ಮಂಗಳೂರು, ಮಿತ್ತಬೈಲು, ಕಲ್ಲಡ್ಕ, ಪುತ್ತೂರು, ಉಪ್ಪಿನಂಗಡಿ ಸಹಿತ ಆರು ವಿಭಾಗಿಯ ಕೇಂದ್ರಗಳಾಗಿ ವಿಂಗಡಿಸಲಾಗಿದೆ. ವಿಭಾಗಿಯ ಕೇಂದ್ರಗಳ ಅಧೀಕ್ಷಕರಾಗಿ ಕ್ರಮವಾಗಿ ಕಾಸಿಂ ಮುಸ್ಲಿಯಾರ್ ಮಠ, ಹನೀಫ್ ಮುಸ್ಲಿಯಾರ್ ಬೋಳಂತೂರು, ಉಮರ್ ದಾರಿಮಿ ಸಾಲ್ಮರ, ಮುಹಮ್ಮದ್ ದಾರಿಮಿ ಚೆಂಗಳ, ಫಾರೂಕ್ ದಾರಿಮಿ ತೆಕ್ಕಾರು, ಹಮೀದ್ ದಾರಿಮಿ ಕಕ್ಕಿಂಜೆ ಕಾರ್ಯನಿರ್ವಹಿಸಲಿದ್ದಾರೆ.

ಜಿಲ್ಲೆಯಲ್ಲಿ 467 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 9,265 ಪರೀಕ್ಷಾರ್ಥಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಎಲ್ಲಾ ಪರೀಕ್ಷಾರ್ಥಿಗಳಿಗೆ ಭಾವಚಿತ್ರವಿರುವ ಹಾಲ್ ಟಿಕೆಟ್ ಗಳನ್ನು ನೀಡಲಾಗಿದೆ.

ಮಾ.11ರಂದು ಮೇಲ್ವಿಚಾರಕರಿಗೆ ಮಾಹಿತಿ ಶಿಬಿರ

ಮಾ.11ರಂದು ಜುಮಾ ನಮಾಝ್ ಬಳಿಕ ವಿಭಾಗಿಯ ಕೇಂದ್ರಗಳಲ್ಲಿ ಆಯಾ ವ್ಯಾಪ್ತಿಯ ಪರೀಕ್ಷೆ ಮೇಲ್ವಿಚಾರಕರಿಗೆ ಸಮಸ್ತ ಮುಫತ್ತಿಶುಗಳ ನೇತೃತ್ವದಲ್ಲಿ ಮಾಹಿತಿ ಶಿಬಿರ ಮತ್ತು ಪರೀಕ್ಷಾ ಪರಿಕರಗಳ ವಿತರಣೆ ನಡೆಯಲಿದೆ.

ಮೇಲ್ವಿಚಾರಕರಿಗೆ ಗುರುತಿನ ಚೀಟಿಯನ್ನು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಮೂಲಕ ನೀಡಲಾಗಿದ್ದು, ಸೇವೆಯಲ್ಲಿರುವ ಮದ್ರಸ ಆಡಳಿತ ಸಮಿತಿಯವರಿಂದ ದೃಢೀಕರಿಸಿ ಪ್ರಸ್ತುತ ಐಡೆಂಟಿಟಿ ಕಾರ್ಡಿನೊಂದಿಗೆ ನಿಗದಿತ ಸಮಯಕ್ಕೆ ತಮಗೆ ತಿಳಿಸಲಾದ ಡಿವಿಶನ್ ಕೇಂದ್ರಗಳಲ್ಲಿ ಹಾಜರಿರಬೇಕೆಂದು ಪರೀಕ್ಷಾ ವಿಭಾಗಿಯ ಅಧೀಕ್ಷಕ ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News