ನೀರಿನ ಬಿಲ್ಲಿನ ದಂಡನಾ ಶುಲ್ಕ ಮನ್ನಾ: ಮೇಯರ್ ಪ್ರೇಮಾನಂದ ಶೆಟ್ಟಿ

Update: 2022-03-10 17:43 GMT

ಮಂಗಳೂರು, ಮಾ.10: ಮನಪಾ ವಿಧಿಸಿದ್ದ ನೀರಿನ ಬಿಲ್ಲಿನ ದಂಡನಾ ಶುಲ್ಕವನ್ನು ಮನ್ನಾ ಮಾಡಲಾಗುವುದು ಎಂದು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಕಳೆದ ಹಲವು ದಿನಗಳಿಂದ ನೀರಿನ ಬಿಲ್ಲಿನಲ್ಲಿ ಸಮಸ್ಯೆ ಎದುರಿಸುತ್ತಿರು ವುದನ್ನು ಮನಗಂಡ ಮೇಯರ್ ಗುರುವಾರ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಈ ಹಿಂದಿನ ಪರಿಷತ್ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ನೀರಿನ ಬಿಲ್ಲಿನಲ್ಲಿ ಹಾಕಲಾದ ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಕ್ರಮಕೈಗೊಳ್ಳಲು ಸೂಚಿಸಲಾಗಿತ್ತು. ಅದರಂತೆ ಗುರುವಾರ ಸಭೆ ನಡೆಸಿ ನೀರಿನ ಬಿಲ್ಲು ವಿತರಣೆಗೆ ತಯಾರಿಸಲಾದ ತಂತ್ರಾಂಶದಲ್ಲಿ ಕೆಲವೊಂದು ನ್ಯೂನತೆಗಳು ಕಂಡು ಬಂದಿದ್ದು, ಅದರಂತೆ ಸಾರ್ವಜನಿಕರಿಗೆ ನೀಡಲಾದ ಬಿಲ್ಲಿನಲ್ಲಿ ಲೋಪಗಳು ಕಂಡು ಬಂದಿತ್ತು. ಅದರಂತೆ ಈ ಹಿಂದೆ ತಂತ್ರಾಂಶ ತಯಾರಿಸಿರುವ ಮೆ.ದಿಯಾ ಸಿಸ್ಟಮ್ಸ್‌ನವರನ್ನು ಸಂಪರ್ಕಿಸಿ ಹೊಸ ತಂತ್ರಾಂಶವನ್ನು ತಯಾರಿಸಲು ಅಥವಾ ಹಳೆಯ ತಂತ್ರಾಂಶವನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಆಯುಕ್ತರಾದ ಅಕ್ಷಯ್ ಶ್ರೀಧರ್, ಉಪಾಯುಕ್ತರಾದ ರವಿಕುಮಾರ್ (ಆಡಳಿತ), ಗಣೇಶನರ್ ಆರ್. (ಅಭಿವೃದ್ಧಿ) ಕಾರ್ಯಪಾಲಕ ಅಭಿಯಂತರರಾದ ಸುರೇಶ್, ರವಿಶಂಕರ್, ಗುರುಪ್ರಸಾದ್ ಹಾಗೂ ಇಂಜಿನಿಯ ರಿಂಗ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News