ಹೋಟೆಲ್ ಮೋತಿಮಹಲ್ ನಲ್ಲಿ ಬೃಹತ್ ಬ್ರಾಂಡ್‍ಗಳ ರೆಡಿಮೇಡ್ ಗಾರ್ಮೇಂಟ್ಸ್ ಮಾರಾಟ

Update: 2022-03-10 18:06 GMT

ಮಂಗಳೂರು: ನಗರದ ಫಳ್ನೀರ್ ರಸ್ತೆಯಲ್ಲಿರುವ ಹೋಟೆಲ್ ಮೋತಿಮಹಲ್‍ನಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಪ್ರತಿಷ್ಠಿತ ಬ್ರಾಂಡುಗಳ ಸಿದ್ಧ ಉಡುಪುಗಳ ಮಾರಾಟ ಮೇಳ ಆರಂಭಗೊಂಡಿದೆ.

ಈ ಮಾರಾಟ ಮೇಳದಲ್ಲಿ 50,000 ಮಿಕ್ಕಿ ವಿವಿಧ ಪ್ರಕಾರದ ಜಂಟ್ಸ್, ಲೇಡಿಸ್, ಕಿಡ್ಸ್ ಪ್ಯಾಂಟ್, ಟೀ-ಶರ್ಟ್, ಲೋವರ್, ಟಾಪ್, ಬರ್ಮುಡಾ, ಕಾಪ್ರಿ, ಪಲಾಜೊ ಕೇವಲ ರೂ. 200 ರಿಂದ 350 ರವರೆಗೆ ದರದಲ್ಲಿ ಲಭ್ಯವಿವೆ. ಇಲ್ಲಿ ಬ್ರಾಂಡೆಡ್ ಕುರ್ತೀಸ್ ಮೇಳವು ಮಹಿಳೆಯರಿಗಾಗಿ ಆಯೋಜಿಸಲಾಗಿದ್ದು ಪ್ರತಿಷ್ಠಿತ ಬ್ರಾಂಡುಗಳ ಕುರ್ತೀಸ್ ರೂ. 350/- ರಿಂದ 500/-ರವರೆಗಿನ ಮೌಲ್ಯದಲ್ಲಿ ದೊರೆಯುತ್ತವೆ. ಪುರುಷರ ಪ್ರಮುಖ ಬ್ರಾಂಡ್‍ಗಳಾದ ಮಾರ್ಕ್ ಟೈಲರ್, ಆ್ಯರೋ, ಪೀಸ್ ಜೀನ್ಸ್, ಬ್ಲಾಕ್‍ ಬೆರೀಸ್ ಲೀ, ನೆಟ್‍ಪ್ಲೇ ಇವುಗಳ ಶರ್ಟ್, ಟೀ-ಶರ್ಟ್ಸ್, ಪ್ಯಾಂಟ್ ಮತ್ತು ಫುಲ್‍ ಓವರ್ ಇತ್ಯಾದಿ ಕೇವಲ ರೂ. 499 ರಿಂದ 999ಕ್ಕೆ ದೊರೆಯುತ್ತವೆ.  ಅದಲ್ಲದೇ, ಮಕ್ಕಳಿಗಾಗಿ 10000ಕ್ಕಿಂತಲೂ ಅಧಿಕ ಕಿಡ್ಸ್ ಗಾರ್ಮೆಂಟ್ಸ್ ಇಲ್ಲಿ ಪ್ರದರ್ಶಿತಗೊಳ್ಳುತ್ತಿದ್ದು ಹುಡುಗರ ಮತ್ತು ಹುಡುಗಿಯರ 1 ತಿಂಗಳಿನಿಂದ 12 ವರ್ಷದ ವಯೋಮಿತಿಯವರಿಗಾಗಿ ಟಾಪ್ಸ್, ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫ್ಯಾನ್ಸ್ ಫ್ರಾಕ್, ಫ್ಯಾನ್ಸಿ ಡ್ರೆಸ್, ಪುಲ್ಲೋವರ್, ಜಾಕೆಟ್ ಇತ್ಯಾದಿ ಕೇವಲ ರೂ. 150 ರಿಂದ 599ಕ್ಕೆ ಲಭ್ಯವಿದೆ.  ಅದಲ್ಲದೇ, ರಾಜಸ್ತಾನಿ ರಾಯಲ್ ಪ್ರಿಂಟೆಡ್ ಬೆಡ್‍ಶೀಟ್, ಪಿಲ್ಲೋ ಕವರ್, ಸೋಫಾ ಕವರ್ ಇತ್ಯಾದಿಗಳ ವಿಫುಲ ಸಂಗ್ರಹವಿರುತ್ತದೆ.

ಗ್ರಾಹಕರ ಅನುಕೂಲತೆಗಾಗಿ ಖರೀದಿಗೆ ಪ್ರಮುಖ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳು, ಗೂಗಲ್ ಪೇ, ಫೋನ್ ಪೇ ಸ್ವೀಕರಿಸಲಾಗುತ್ತಿದ್ದು, ಮಧ್ಯಾಹ್ನ ಭೋಜನ ವಿರಾಮವಿಲ್ಲದೇ ನಿರಂತರವಾಗಿ ಮಾರಾಟ ಮೇಳವು ಚಾಲ್ತಿಯಲ್ಲಿರುವುದೆಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News