ಫ್ರಾನ್ಸ್: ಹಿಂಸೆಗೆ ತಿರುಗಿದ ಪ್ರತಿಭಟನೆ

Update: 2022-03-10 18:52 GMT

ಪ್ಯಾರಿಸ್, ಮಾ.10: ಜೈಲಿನಲ್ಲಿ ಬಂಧನದಲ್ಲಿದ್ದ ರಾಷ್ಟ್ರೀಯವಾದಿ ವ್ಯಕ್ತಿಯೊಬ್ಬನ ಮೇಲೆ ಸಹಖೈದಿ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಫ್ರಾನ್ಸ್ ನ ಕೋರ್ಸಿಕಾ ದ್ವೀಪದಲ್ಲಿ ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
1988ರಲ್ಲಿ ಕೋರ್ಸಿಯಾದ ಉನ್ನತ ಪ್ರಾದೇಶಿಕ ಅಧಿಕಾರಿಯನ್ನು ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಯುವಾನ್ ಕೊಲೊನ್ನ ಎಂಬ ವ್ಯಕ್ತಿಯ ಮೇಲೆ ಭಯೋತ್ಪಾದಕ ಕೃತ್ಯದ ಅಪರಾಧಕ್ಕೆ ಜೈಲಿನಲ್ಲಿದ್ದ ಸಹಖೈದಿ ಮಾರ್ಚ್ 2ರಂದು ಹಲ್ಲೆ ನಡೆಸಿದ್ದು ತೀವ್ರ ಗಾಯಗೊಂಡಿದ್ದ ಯುವಾನ್ ಕೋಮಾಕ್ಕೆ ಜಾರಿದ್ದ. ಯುವಾನ್ನನ್ನು ಕೋರ್ಸಿಕಾದ ಸ್ವಾತಂತ್ರ್ಯಕ್ಕೆ ಹೋರಾಡುವ ಹೀರೋ ಎಂದೇ ಪರಿಗಣಿಸಿರುವ ಬುಡಕಟ್ಟು ಜನರು ಈ ಹಲ್ಲೆಯನ್ನು ಖಂಡಿಸಿ ಕೋರ್ಸಿಕಾದ ಪ್ರಮುಖ ನಗರಗಳಲ್ಲಿ ನಡೆಸಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಅಜಾಸಿಯೊ ನಗರದಲ್ಲೇ ಪತ್ರಕರ್ತರ ಸಹಿತ ಕನಿಷ್ಟ 14 ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News