×
Ad

ಕೊಂಕಣಿ ಲೇಖಕ ಸಂಘದ ಪ್ರಶಸ್ತಿಗೆ ಎಡಿ ನೆಟ್ಟೋ ಆಯ್ಕೆ

Update: 2022-03-11 13:05 IST

ಮಂಗಳೂರು: ಕೊಂಕಣಿ ಲೇಖಕ ಸಂಘದ ಪ್ರಥಮ ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಕೊಂಕಣಿಯ ಖ್ಯಾತ ಸಾಹಿತಿ ಎಡಿ ನೆಟ್ಟೋ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ಸಂಚಾಲಕರಾದ ರಿಚರ್ಡ್ ಮೊರಾಸ್, ಮಾ. 24ರಂದು ಸಂಜೆ 6.30ಕ್ಕೆ ನಂತೂರಿನ ಬಜ್ಜೋಡಿಯ ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಪ್ರಶಸ್ತಿಯು 25000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅಥಿಯಾಗಿ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ಭಾಗವಹಿಸಲಿದ್ದು, ಮಂಗಳೂರು ವಿಸ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಧನಂಜಯ ಕುಂಬ್ಳೆ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಡೊಲ್ಫಿ ಎಫ್. ಲೋಬೋ, ಸಲಹಾ ಸಮಿತಿ ಸದಸ್ಯ ಜೆ.ಎಫ್. ಡಿಸೋಜಾ, ಸಂಘಟನಾ ಸದಸ್ಯ ಟೈಟಸ್ ನೊರೊನ್ನಾ ಭಾಗವಹಿಸಿದ್ದರು.

ಎಡಿ ನೆಟ್ಟೋ ಪರಿಚಯ

ಎಡ್ವಿನ್ ಮಾರಿಯಾಣ್ ನೆಟ್ಟೋ ತಮ್ಮ ತಂದೆ ದಿ. ಆಮಾಂಡೋ ನೆಟ್ಟೋ ಅವರ ಪ್ರಭಾವದಿಂದ ನಾಟಕ, ನಟನೆ, ಕ್ರೀಡೆಯ ಮೂಲಕ ಆಸಕ್ತಿ ಬೆಳೆಸಿಕೊಂಡು ಹೈಸ್ಕೂಲ್ ಅವಧಿಯಲ್ಲೇ ಕಾದಂಬರಿ ಬರೆಯಲು ಆರಂಭಿಸಿದವರು. ಭಾರತೀಯ ವಾಯುಸೇನಾ ಪಡೆಯಲ್ಲಿ ಫುಟ್ಬಾಲ್ ತಂಡದ ಸದಸ್ಯ, ಗಿಟಾರ್ ವಾದಕ, ಹಾಡುಗಾರ, ಉತ್ತಮ ಓದುಗಾರ, ಇಂಗ್ಲಿಷ್ ಕಾದಂಬರಿ ಓದುವ ಹವ್ಯಾಸಗಳ ಮೂಲಕ ಬರೆಯುವ ಆಸಕ್ತಿಯನ್ನು ಬೆಳೆಸಿಕೊಂಡು ಕಥೆ, ಲೇಖನ ಬರೆಯಲು ಆರಂಭಿಸಿದರು. 66 ವರ್ಷಗಳಿಂದ ಇಂದಿನವರಿಗೆ ಇವರ 2021 ಕೃತಿಗಳು, 530 ಕಥೆಗಳು, 2464 ಲೇಖನಗಳು, 26 ಕವಿತೆಗಳು, 9 ಕಾದಂಬರಿಗಳು, 2 ಕಥಾ ಸಂಗ್ರಹಗಳನ್ನು ರಚಿಸಿದ್ದಾರೆ.

ರಾಕ್ಣೋ, ದಿವೊ ಮುಂಬೈ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೇಯ್ಟ್ ಕೊಂಕಣಿ ಟ್ಯಾಲೆಂಟ್ಸ್ ಪ್ರಶಸ್ತಿ, ದಾಯ್ಜಿ ದುಬೈ ಪ್ರಶಸ್ತಿ, ಕೊಂಕ್ಣಿ ಕುಟುಮ್ ಬಾಹ್ರೆಯ್ನ್ ಪ್ರಶಸ್ತಿ, ಸಂದೇಶ ಪ್ರಶಸ್ತಿಯನ್ನು ಪಡೆದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News