"ನಾನು ಜಯಿಸಿದರೆ ಮುಸ್ಲಿಮರು ತಿಲಕ ಇಡುವಂತೆ ಮಾಡುತ್ತೇನೆ" ಎಂದಿದ್ದ ಬಿಜೆಪಿ ಶಾಸಕನನ್ನು ಸೋಲಿಸಿದ ಸೈಯಿದಾ ಖಾತೂನ್

Update: 2022-03-11 17:19 GMT
Photo: Twitter

ಲಕ್ನೋ: ತಾನು ಮತ್ತೆ ಆಯ್ಕೆಯಾದರೆ ಮುಸ್ಲಿಮರು ತಿಲಕಗಳನ್ನು ಧರಿಸುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಡೊಮರಿಯಾಗಂಜ್‌ ಶಾಸಕ ರಾಘವೇಂದ್ರ ಪ್ರತಾಪ್‌ ಸಿಂಗ್‌ ರನ್ನು ಸಮಾಜವಾದಿ ಪಕ್ಷದ ಸೈಯದಾ ಖಾತೂನ್ ಅವರು ಸೋಲಿಸಿದ್ದಾರೆ.  

  2017ರ ಚುನಾವಣೆಯಲ್ಲಿ ಪ್ರತಾಪ್‌ ಸಿಂಗ್‌ ವಿರುದ್ಧ ಕೇವಲ 171 ಮತಗಳಿಂದ ಸೋಲನುಭವಿಸಿದ್ದ ಖಾತೂನ್‌, ಈ ಬಾರಿ 771 ಮತಗಳಿಂದ ವಿಜಯದ ನಗೆ ಬೀರಿದ್ದಾರೆ. ಸಿಂಗ್ ಅವರು 84,327 ಮತಗಳನ್ನು ಪಡೆದಿದ್ದರೆ, ಖಾತೂನ್‌ ಈ ಬಾರಿ 85,098 ಮತಗಳನ್ನು ಪಡೆದು ಡೊಮರಿಯಾಗಂಜ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿಷ್ಟ ಎಂದು ಹೇಳಲಾದ ಪ್ರತಾಪ್ ಸಿಂಗ್ ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮುಸ್ಲಿಂ ವಿರೋಧಿ ನಿಲುವನ್ನು‌ ಪ್ರಚಾರ ಮಾಡುತ್ತಿದ್ದರು.

 ನನ್ನನ್ನು ಮತ್ತೆ ಶಾಸಕರನ್ನಾಗಿಸಿದರೆ ಅವರು (ಮುಸ್ಲಿಮರು) ಟೋಪಿ ಧರಿಸುವುದನ್ನು ಬಿಟ್ಟು ತಿಲಕ ಹಚ್ಚಲು ಆರಂಭಿಸುತ್ತಾರೆ ಎಂಬ ಧ್ವೇಷದ ಹೇಳಿಕೆಗಳನ್ನು ನೀಡಿದ್ದರು.

ಕಳೆದ ಚುನಾವಣೆಯಲ್ಲಿ ತಾನು ಆಯ್ಕೆಯಾದ ನಂತರ, "ಮುಸ್ಲಿಮರ 250 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು, ಅವರ ಅಂಗಡಿಗಳನ್ನು ನಾಶಪಡಿಸಲಾಯಿತು" ಎಂದು ಸಿಂಗ್ ಹೇಳಿಕೊಂಡಿದ್ದರು. “ದೊಮರಿಯಾಗಂಜ್‌ನಲ್ಲಿ ಜೈ ಶ್ರೀ ರಾಮ್ ಇರಬೇಕೇ? ಅಥವಾ ವಲೇಕುಮ್ ಸಲಾಂ ಇರಬೇಕೇ ಎಂದು ಪ್ರಶ್ನಿಸಿದ್ದ ಪ್ರತಾಪ್‌ ಸಿಂಗ್‌, ದ್ವೇಷಭಾಷಣ ಮಾಡಿ ಹಲವು ವಿವಾದ ಸೃಷ್ಟಿಸಿದ್ದರು.

"ನನಗೆ ಮತ ಹಾಕದ ಯಾವುದೇ ಹಿಂದೂ ಮಿಯಾನ್ (ಮುಸ್ಲಿಮರ) ರಕ್ತವನ್ನು ಹೊಂದಿದ್ದಾನೆ” ಎಂದು ಕೂಡಾ ಅವರು ಚುನಾವಣಾ ಭಾಷಣದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News