×
Ad

ಸಾಲಿಗ್ರಾಮ: ವ್ಯಾಪಾರೋದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ

Update: 2022-03-12 18:49 IST

ಉಡುಪಿ : ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ  2022-23 ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಎಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ಬಗ್ಗೆ ವ್ಯಾಪಾರಸ್ಥರು ನಿಗದಿತ ದಾಖಲೆಗಳಾದ ಉದ್ಯಮದಾರರ ಆಧಾರ್ ಕಾರ್ಡ್ ನಕಲು ಪ್ರತಿ / ವಾಣಿಜ್ಯ ಕಟ್ಟಡದ ಬಾಡಿಗೆ ಕರಾರು ಪತ್ರ/ ಒಪ್ಪಿಗೆ ಪತ್ರ / ಕಟ್ಟಡ ಮಾಲಕರ ಪುರಾವೆ, ಅಫಿದಾತ್ ಹಾಗೂ ಹಿಂದಿನ ವಷರ್ದ ವ್ಯಾಪಾರ ಪರವಾನಿಗೆ ಪತ್ರದೊಂದಿಗೆ ನಿಗದಿತ ನಮೂನೆ ಯಲ್ಲಿ ಅರ್ಜಿ ಸಲ್ಲಿಸಿ ಉದ್ಯಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬಹುದು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ಪಟ್ಟಣ ಪಂಚಾಯತ್ ಕಛೇರಿಗೆ ನಿಗದಿತ ದಾಖಲೆಗಳಾದ ಅರ್ಜಿದಾರರ ಪೋಟೋ, ಅರ್ಜಿದಾರರ ಆಧಾರಕಾರ್ಡ್ ನಕಲು ಪ್ರತಿ, ವಾಣಿಜ್ಯ ಕಟ್ಟಡದ ಬಾಡಿಗೆ ಕರಾರು ಪತ್ರ/ ಒಪ್ಪಿಗೆ ಪತ್ರ/ ಕಟ್ಟಡ ಮಾಲಕರ ಪುರಾವೆ, ಅಫಿದಾತ್‌ನೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ತಪ್ಪಿದ್ದಲ್ಲಿ ಕರ್ನಾಟಕ ಪೌರಸಭೆ ಅಧಿನಿಯಮ ಪ್ರಕಾರ ದಂಡನೆ ವಿಧಿಸಿ ಸೂಕ್ತಕ್ರಮ ಕೈಗೊಳ್ಳಲಾ ಗುವುದು ಎಂದು ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News