ದುಶ್ಚಟಗಳಿಗೆ ದಾಸರಾಗಬೇಡಿ: ವಂ. ವಲೇರಿಯನ್ ಮೆಂಡೋನ್ಸಾ

Update: 2022-03-12 13:28 GMT

ಕಲ್ಯಾಣಪುರ : ಮಿಲಾಗ್ರಿಸ್ ಪದವಿ ಕಾಲೇಜು ಕಲ್ಯಾಣಪುರ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ೨೦೨೧-೨೨ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉಡುಪಿ ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಗ್ರಿ ನೋಳೆ ಇಲ್ಲಿ ನಡೆಯಿತು.

ಶಿಬಿರವನ್ನು ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ. ವೆಲೆರಿಯನ್ ಮೆಂಡೋನ್ಸಾ ಉದ್ಘಾಟಿಸಿ ಮಾತನಾಡಿ, ಯುವ ಜನತೆಯ ಸದ್ಭಳಕೆಯಾಗಲು ಇಂತಹ ಶಿಬಿರಗಳು ಅಗತ್ಯ. ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾಗದೇ, ಸಮಾಜ ಸೇವೆಯಿಂದ ಸಮಾಜದ ಜನರ ಪ್ರೀತಿ, ವಾತ್ಸಲ್ಯವನ್ನು ಪಡೆಯಲು ಸಾಧ್ಯ ಎಂದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ  ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಗ್ರಿ ನೋಳೆಯ ಮುಖ್ಯೋಪಾಧ್ಯಾಯರಾದ ರಘುರಾಮ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಭಾರತಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕ ರಾಜಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಸಂಸ್ಥೆಗಳ ಅಧ್ಯಕ್ಷ ಪ್ರಶಾಂತ್,  ರಾಘವೇಂದ್ರ ನಾಯಕ್ ಮತ್ತು  ಸದಾನಂದ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಘಟಕದ ಅಧಿಕಾರಿ ಅನುಪಮಾ ಜೋಗಿ ಸ್ವಾಗತಿಸಿ, ಯೋಜನಾಧಿಕಾರಿ ಮೆಲ್ಸನ್ ಡಿಸೋಜ ವಂದಿಸಿದರು. ಶರಣ್ಯಾ ಕಾರ‌್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News