×
Ad

​ಮಹಿಳೆಯ ಸರ ಸುಳಿಗೆ

Update: 2022-03-12 21:09 IST

ಮಣಿಪಾಲ : ಪರಿಚಯದ ವ್ಯಕ್ತಿಯೊಬ್ಬ ಮಹಿಳೆಯ ಸರವನ್ನು ಸುಳಿಗೆ ಮಾಡಿ ಪರಾರಿಯಾಗಿರುವ ಘಟನೆ ಮಾ.11ರಂದು ಬೆಳಗ್ಗೆ ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ನಡೆದಿದೆ.

ರಾಜೀವನಗರದ ನಳಿನಿ ರಾವ್(74) ಎಂಬವರ ಮನೆಗೆ ಬೈಕಿನಲ್ಲಿ ಬಂದ ಪರಿಚಯದ ದಿವಾಕರ ಪೂಜಾರಿ ಎಂಬಾತನು  ನಳಿನಿ ಅವರ ಕುತ್ತಿಗೆಯಲ್ಲಿದ್ದ ಮೂವರೆ ಪವನ್ ತೂಕದ ಚಿನ್ನದ ಕರಿಮಣಿ ಹಾಗೂ ಆರು ಪವನ್ ತೂಕದ ಹವಳದ ಸರ ಎಳೆದುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾನೆ. ಕಳವಾದ ಸೊತ್ತಿನ ಮೌಲ್ಯ 3,50,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ  ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News