×
Ad

ವಿವಿಧ ಬಣ್ಣಗಳಿರುವ ಈ ಭೂಮಿ ಕೆಂಪು ಬಣ್ಣಕ್ಕೆ ಬದಲಾಗದಿರಲಿ: ಎಂ ಝೈನುದ್ದೀನ್ ಮುಕ್ಕ

Update: 2022-03-12 23:07 IST

ಮಂಗಳೂರು : ಎಲ್ಲಾ ಮಾನವರ ರಕ್ತದ ಬಣ್ಣ ಒಂದೇ, ಬಣ್ಣ ಬಣ್ಣದ ಧ್ವಜಗಳ ಜಂಜಾಟದ ಮಧ್ಯೆ ಕೆಂಪು ಬಣ್ಣ ಹರಿಸದಿರಿ ಎಂದು  ಸೂಪರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕೌನ್ಸಿಲ್ ಇದರ ಅಧ್ಯಕ್ಷರಾದ  ಎಂ, ಝೈನುದ್ದೀನ್ ಮುಕ್ಕ ಹೇಳಿದರು.

ಅವರು ಇಂದು ಮುಕ್ಕ   ಸೂಪರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕೌನ್ಸಿಲ್  ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಬ್ಲಡ್  ಹೆಲ್ಪ್ ಕೇರ್  ಕರ್ನಾಟಕ ಸಂಸ್ಥೆಯ 126ನೇ ಬೃಹತ್  ಸಾರ್ವಜನಿಕ ರಕ್ತದಾನ ಶಿಬಿರ ಮುಕ್ಕ ಶ್ರೀನಿವಾಸ್ ಆಸ್ಪತ್ರೆ ರಕ್ತನಿಧಿ ಇವರ ಸಹಕಾರದಲ್ಲಿ   ಮುಕ್ಕ ಅಂಜುಮಾನ್ ಮದ್ರಸ ಕಟ್ಟಡದಲ್ಲಿ  ರಕ್ತದಾನ ಶಿಬಿರ ಉದ್ಘಾಟಿಸಿ ಮಾತಾಡುತ್ತಿದ್ದರು. 

ಸಮಾರಂಭದ ಅದ್ಯಕ್ಷತೆ ಯನ್ನು ಜುಮ್ಮಾ ಮಸೀದಿ ಮುಕ್ಕ ಇದರ ಅಧ್ಯಕ್ಷರಾದ ಅಬ್ದುಲ್ ರಝಾಕ್ ವಹಿಸಿದರು. ಹಿರಿಯ ವೈದ್ಯರಾದ ಡಾ.ವಿಜೇಂದ್ರ ಇವರನ್ನು ಈ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜುಮ್ಮಾ ಮಸೀದಿ ಮುಕ್ಕ ಇದರ ಪ್ರಧಾನ ಕಾರ್ಯದರ್ಶಿ ಎಂ.ಸಿ. ಉಮ್ಮರ್ ಫಾರೂಕ್,  ನುಶ್ರತುಲ್ ಮಸಾಕೀನ್ ಮುಕ್ಕ ಇದರ ಅ‌ಧ್ಯಕ್ಷರಾದ ಅಬ್ದುಲ್ ರಹಿಮಾನ್, ಸೂಪರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಸಾಧಿಕ್ ಈದ್ಗಾ, ಕೋಶಾಧಿಕಾರಿ ಶಾಹಿಲ್, ಜುಮ್ಮಾ ಮಸೀದಿ ಜತೆ ಕಾರ್ಯದರ್ಶಿ ಅಕ್ಬರ್ ಅಲಿ, NRI ಗೌರವ ಅಧ್ಯಕ್ಷರಾದ ಇಕ್ರಿಮತ್ ಝಕರಿಯ್ಯ, ಮುಕ್ಕ   ಶ್ರೀನಿವಾಸ್ ಆಸ್ಪತ್ರೆ  ರಕ್ತನಿಧಿ ವೈದ್ಯೆ ರಚನಾ,  ಬಲ್ಕುಂಜೆ   ಶಬೀರ್ ಅಹ್ಮದ್ , ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ, ಸಂಚಾಲಕರಾದ ಶಂಸುದ್ದೀನ್ ಬಲ್ಕುಂಜೆ,ರಕ್ತದಾನ ಶಿಬಿರದ ಉಸ್ತುವಾರಿ ಇಂತಿಯಾಝ್ ಬಜಪೆ, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫಾ ಕೆ,ಸಿ,ರೋಡ್, ಕಾರ್ಯ ನಿರ್ವಾಹಕ ಶಹಜಾನ್  ಉಪಸ್ಥಿತರಿದ್ದರು.

ಜುಮ್ಮಾ ಮಸೀದಿ ಮುಕ್ಕ ಖತೀಬ್ ಮನ್ಸೂರು ಮದನಿ ವಳವೂರು ದುವಾ ನೇರವೇರಿಸಿದರು. ಸೂಪರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕೌನ್ಸಿಲ್ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಹಾಬ್ ಶೇಖ್ ಸ್ವಾಗತಿಸಿದರು. ಸೂಪರ್  ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕೌನ್ಸಿಲ್ ಇದರ ಮಾಜಿ ಅಧ್ಯಕ್ಷರಾದ ಕೆ,ಎಸ್,ಉಸ್ಮಾನ್ ವಂದಿಸಿದರು. ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕಾರ್ಯನಿರ್ವಾಹಕ ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News