×
Ad

ಮಾ.13: ಕೆರೆಕಾಡು ಸಾದಾತ್ ವಲೀ ಸ್ವಲಾತ್ ಮಜ್ಲಿಸ್ ವತಿಯಿಂದ ಉಚಿತ ಸಾಮೂಹಿಕ ವಿವಾಹ, ಮಜ್ಲಿಸುನ್ನೂರ್

Update: 2022-03-12 23:32 IST

ಮುಲ್ಕಿ, ಮಾ.12: ಇಲ್ಲಿಗೆ ಸಮೀಪದ ಕೆರೆಕಾಡು ಸಾದಾತ್ ವಲೀ‌ ಸ್ವಲಾತ್‌ ಮಜ್ಲಿಸ್ ಟ್ರಸ್ಟ್ ವತಿಯಿಂದ 18ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮತ್ತು ಮಜ್ಲಿಸುನ್ನೂರ್ ಕಾರ್ಯಕ್ರಮ ಮಾ.13ರಂದು ಕೆರೆಕಾಡು ಟ್ರಸ್ಟ್ ನ ವಠಾರದಲ್ಲಿ‌ನಡೆಯಲಿರುವುದು.

ಕಾರ್ಯಕ್ರಮದ ನೇತೃತ್ವವನ್ನು ಮುಹಮ್ಮದ್‌ ಮದಾರಿಯವರು ವಹಿಸಲಿದ್ದಾರೆ.

ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಮಜ್ಲಿಸುನ್ನೂರ್, ರಕ್ತದಾನ ಶಿಬಿರ,‌ ಸೌಹಾರ್ದ ಸಂಗಮ ಹಾಗೂ ಪದ್ಮಶ್ರೀ ಹಾಜಬ್ಬ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.‌

ಕಾರ್ಯಕ್ರಮದಲ್ಲಿ ನೂರೇ ಅಜ್ಮೀರ್ ಖ್ಯಾತಿಯ ವಲಿಯುದ್ದೀನ್ ಪೈಝಿ, ಇರ್ಷಾದ್ ದಾರಿಮಿ ಮಿತ್ತಬೈಲ್, ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಎಸ್.ಬಿ. ದಾರಿಮಿ ಮುಲ್ಕಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು ,ಅನೀಸ್ ಕೌಸರಿ ಮುಂತಾದ ಧಾರ್ಮಿಕ ನಾಯಕರು,  ಮುಲ್ಕಿ ಮೂಡಬಿದಿರೆ ಕ್ಷೇತ್ರ ಶಾಸಕ ಉಮನಾಥ ಕೋಟ್ಯಾನ್,  ಮಾಜೀ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಯುವ ಘಟಕದ ಮುಖಂಡ ಮಿಥುನ್ ರೈ, ಮಾಜೀ ಎಂಎಲ್ಸಿ ಐವನ್ ಡಿಸೋಜ ಮೊದಲಾದ ರಾಜಕೀಯ ನೇತಾರರು,  ಸಾಮಾಜಿಕ ಮುಂದಾಳುಗಳೂ ಭಾಗವಹಿಸಲಿದ್ದಾರೆ ಎಂದು  ಸಂಘಟಕ ಇರ್ಷಾದ್ ಕೆರೆಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News