ನೆಟ್ಲಮುಡ್ನೂರು ಗ್ರಾ.ಪಂ.ನೂತನ ಸಭಾಭವನ ಶಾಸಕ ರಾಜೇಶ್ ನಾಯ್ಕ್ ಉದ್ಘಾಟನೆ
ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮಪಂಚಾಯತ್ ನ ನೂತನ ಸಭಾಭವನವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಉದ್ಘಾಟಿಸಿದರು, ಬಳಿಕ ಸಭಾಭವನದ ಮೇಲಂತಸ್ತು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಸದಸ್ಯರಾದ ಲತೀಫ್ ನೇರಳಕಟ್ಟೆ, ಧನಂಜಯ ಗೌಡ, ಅಶೋಕ ರೈ, ಪ್ರೇಮ, ಲಕ್ಷ್ಮೀ, ಶಾಲಿನಿ ಹರೀಶ್,ಸಮಿತಾ ಡಿ.ಪೂಜಾರಿ, ಜಯಂತಿ ಪೂಜಾರಿ. ಜಿ.ಪಂ.ಮಾಜಿ ಸದಸ್ಯೆ ಮಂಜುಳಾ ಮಾವೆ, ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿಜಯ, ನೇರಳಕಟ್ಟೆ ಸಿಎ ಬ್ಯಾಂಕ್ ಉಪಾಧ್ಯಕ್ಷ ಡಿ.ತನಿಯಪ್ಪ ಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಗಟ್ಟಿ, ಕಾರ್ಯದರ್ಶಿ ವಿಮಲಾ, ನಿವೃತ್ತ ಶಿಕ್ಷಕ ರಾಮಚಂದ್ರ ಮಾಸ್ಟರ್, ನೇರಳಕಟ್ಟೆ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಎನ್.ಕೆ. ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳಕಟ್ಟೆ ಶಾಲೆಯ ಅಕ್ಷರ ದಾಸೋಹ ಕೊಠಡಿಯ ಉದ್ಘಾಟನೆ, ಏಮಾಜೆ ಶಾಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಸಭಾಭವನ ಕಟ್ಟಡ ನಿರ್ಮಾಣ ಕಾಮಗಾರಿಯ ಗುತ್ತಿಗೆದಾರ ರಾಜೀವ ನಾಯರ್ ಅವರನ್ನು ಸನ್ಮಾನಿಸಲಾಯಿತು.