×
Ad

‘ವಿ ದ ಪೀಪಲ್ ಆಫ್ ಇಂಡಿಯಾ’ ಕನ್ನಡ ನಾಟಕ ಪ್ರದರ್ಶನ

Update: 2022-03-13 17:28 IST

ಉಡುಪಿ : ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂತರಿಕಗುಣಮಟ್ಟ ಭರವಸಾ ಕೋಶ, ಸಾಂಸ್ಕೃತಿಕ ಸಂಘ, ಸಾಹತ್ಯ ಸಂಘ, ರಾಜ್ಯಶಾಸ್ತ್ರ ಸಂಘಗಳ ಸಹಯೋಗದಲ್ಲಿ ಶಿವಮೊಗ್ಗ ರಂಗಾಯಣದ ತಂಡ ಅಭಿನಯಿಸಿರುವ ರಾಜಪ್ಪ ದಳವಾಯಿ ನಿರ್ದೇಶನದ ‘ವಿ ದ ಪೀಪಲ್ ಆಫ್ ಇಂಡಿಯಾ’ ಕನ್ನಡ ನಾಟಕ ಇತ್ತೀಚೆಗೆ ಉಡುಪಿಯ ಪುರವನದಲ್ಲಿ ಪ್ರದರ್ಶನಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ಮಾತನಾಡಿ, ಭಾರತದ ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಭಾರತದ ಜನಮಾನಸದ ದೃಶ್ಯ ಕಾವ್ಯವಾದ ಈ ಶೈಕ್ಷಣಿಕ ನಾಟಕವನ್ನು ವಿದ್ಯಾರ್ಥಿಗಳು ನೋಡಬೇಕು ಎಂದು ಹೇಳಿದರು.

ರಂಗಾಯಣ ಶಿವಮೊಗ್ಗದ ಮ್ಯಾನೇಜರ್ ಶೈಲೇಶ್, ವಿಜ್ಞಾನ ವಿಭಾಗ ಡೀನ್ ರಾಮಚಂದ್ರ ಅಡಿಗ ಜಿ., ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಗೌರಿ ಎಸ್. ಭಟ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ ಭಂಡಾರಿ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ.ವಾಣಿ ಆರ್.ಬಲ್ಲಾಳ್, ಸಾಂಸ್ಕೃತಿಕ ಸಂಘದ ಸಂಚಾಲಕಿ ಆಶಾ, ಸಾಹಿತ್ಯ ಸಂಘದ ಸಂಚಾಲಕಿ ರಮ್ಯ ಕೆ.ಐತಾಳ್, ಸುಚಿತ್ರಾ ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News