×
Ad

ಕೋಡಿಯಲ್ಲಿ 125ನೆ ವಾರದ ಸ್ವಚ್ಛತಾ ಅಭಿಯಾನ

Update: 2022-03-13 19:01 IST

ಕುಂದಾಪುರ : ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ 125 ನೇ ವಾರದ ಸ್ವಚ್ಛತಾ ಅಭಿಯಾನವು ರವಿವಾರ ಕೋಡಿ ಕಡಲತೀರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಪರಿಸರವಾದಿ ಮಂಗಳೂರಿನ ದಿನೇಶ್ ಹೊಳ್ಳ, ಕುಂದಾಪುರದ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಡಾ.ಆಶಿಶ್ ರೆಡ್ಡಿ ಮಾತನಾಡಿದರು.

ಹಿರಿಯ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್, ಮೂಳೆತಜ್ಞ ಡಾ.ದುರ್ಗಾ ಪ್ರಸಾದ್, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಆಂದೋಲನದ ಕೆಂಚನೂರು ಸೋಮಶೇಖರ ಶೆಟ್ಟಿ, ಬೆಂಗಳೂರಿನ ರಮೇಶ್ ರಾವ್, ಎಫ್‌ಎಸ್‌ಎಲ್‌ನ ವೆಂಕಟೇಶ್, ದಿನೇಶ್, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್, ಆಶಾಲತಾ ಶೆಟ್ಟಿ, ಕುಂದಾಪುರ ಸನ್‌ರೈಸ್ ರೋಟರಿಯ ಗಣೇಶ್ ಹಾಗೂ ಸದಸ್ಯರು, ರೈಲು ಪ್ರಯಾಣಿಕರ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ಭಾಸ್ಕರ್ ಪೂಜಾರಿ, ಪುಂಡಲೀಕ ಬಂಗೇರ, ಕ್ಲೀನ್  ಕುಂದಾಪುರ ಪ್ರಾಜೆಕ್ಟ್‌ನ ಸ್ವಯಂಸೇವಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News