ರಾಷ್ಟ್ರೀಯ ಲೋಕ ಅದಾಲತ್; ದ.ಕ.ಜಿಲ್ಲೆಯಲ್ಲಿ 3150 ಪ್ರಕರಣಗಳ ಇತ್ಯರ್ಥ
ಮಂಗಳೂರು : ದ.ಕ.ಜಿಲ್ಲೆ ಹಾಗೂ ತಾಲೂಕುಗಳ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲೆಯ ವ್ಯಾಜ್ಯ ಪೂರ್ವ ಹಾಗೂ ಬಾಕಿ ಪ್ರಕರಣಗಳ ಪೈಕಿ 3150 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ಜಿಲ್ಲೆಯ ೪೪ ಬೆಂಚ್‌ಗಳಲ್ಲಿ ಲೋಕ ಅದಾಲತ್ ಪ್ರಕರಣಗಳನ್ನು ಕೈಗೊಳ್ಳಲಾಗಿತ್ತು. ಈ ಅದಾಲತ್‌ನಲ್ಲಿ ೧೧,೬೪೮ ಪ್ರಕರಣಗಳನ್ನು ವಿಚಾರಣೆಗಾಗಿ ಗುರುತಿಸಿಕೊಳ್ಳಲಾಗಿತ್ತು. ಆ ಪೈಕಿ ೩,೧೫೦ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ೧೫,೨೧,೬೪,೦೯೮ ರೂ.ವನ್ನು ಪರಿಹಾರ ರೂಪದಲ್ಲಿ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
೮೯೩ ವ್ಯಾಜ್ಯ ಪೂರ್ವ ಪ್ರಕರಣಗಳ ಪೈಕಿ ೧೩೬ ಪ್ರಕರಣಗಳನ್ನು ೧,೧೫,೧೪,೦೧೩ ರೂ.ಗಳಿಗೆ ಇತ್ಯರ್ಥ ಪಡಿಸಲಾಯಿತು. ಬಾಕಿ ಇತ್ಯರ್ಥ ಪ್ರಕರಣಗಲ್ಲಿ ೧೦,೭೫೫ ಪ್ರಕರಣಗಳಲ್ಲಿ ೩,೦೧೪ ಇತ್ಯರ್ಥಗೊಂಡಿವೆ. ೧೪,೦೬,೫೦,೦೮೫ ರೂ.ವನ್ನು ಪರಿಹಾರ ಮೊತ್ತವಾಗಿ ಪಾವತಿಯಾಗಿದೆ.
ಸಾರಿಗೆ ಪ್ರಕರಣಗಳ ಪೈಕಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವುದು ಮತ್ತು ಇತರ ಕಾರಣಗಳಿಂದ ಕೆಎಸ್ಸಾರ್ಟಿಸಿ ನಿಗಮದ ಪ್ರಕರಣಗಳ ಪೈಕಿ ಮಂಗಳೂರಿನ ೩೨ ಪ್ರಕರಣಗಳನ್ನು ರಾಜ್ಯ ಮಟ್ಟದಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವಿರಾಜ್ ವರ್ಣೇಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.