×
Ad

ಪಣಂಬೂರು ಬೀಚ್ ಸ್ವಚ್ಛತಾ ಕಾರ್ಯಕ್ರಮ

Update: 2022-03-13 19:08 IST

ಮಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮೋಮ್ಸ್ ಆಫ್ ಮಂಗಳೂರು ಹಾಗೂ ಪಣಂಬೂರು ಬೀಚ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಬೀಚ್ ಕ್ಲೀನಪ್  ಅಭಿಯಾನವು ರವಿವಾರ ಪಣಂಬೂರು ಬೀಚ್‌ನಲ್ಲಿ  ನಡೆಯಿತು.

60 ಮಂದಿ ಯುವತಿಯರು, ಮಹಿಳೆಯರು ಪಾಲ್ಗೊಂಡಿದ್ದ ಈ ಅಭಿಯಾನದಲ್ಲಿ ಸುಮಾರು 600 ಕೆಜಿಯಷ್ಟು ತ್ಯಾಜ್ಯ ಸಂಗ್ರಹ ಮಾಡಲಾಯಿತು. ಬಳಿಕ ಈ ತ್ಯಾಜ್ಯವನ್ನು ಮಂಗಳೂರು ನಗರ ಪಾಲಿಕೆಯವರು ವಿಲೇವಾರಿ ಮಾಡಿದರು.

ಸಂಘಟನೆಯ ಪ್ರೀತಿಕಾ, ಡಾ. ಶಿಲ್ಪಾ ಶ್ರೇಯಸ್, ಡಾ. ಶ್ವೇತಾ ಕಾಮತ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News