ಮಾ.14ರಿಂದ ರಾಜ್ಯಪಾಲರ ಪ್ರವಾಸ
Update: 2022-03-13 19:17 IST
ಮಂಗಳೂರು : ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಾ.14 ಹಾಗೂ15ರಂದು ದ.ಕ. ಮತ್ತು ಉಡುಪಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.
ಮಾ.14ರ ಬೆಳಗ್ಗೆ 10.50ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಪೂ.11.30ಕ್ಕೆ ಸಕ್ಯೂಟ್ ಹೌಸ್‌ಗೆ ಆಗಮಿಸಿ ವಿಶ್ರಾಂತಿ ಪಡೆಯುಬರು. 11.55ಕ್ಕೆ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನಕ್ಕೆ ತೆರಳುವರು. ಮಧ್ಯಾಹ್ನ ೧೨:೨೫ಕ್ಕೆ ಸರ್ಕ್ಯೂಟ್ ಹೌಸ್‌ಗೆ ಮರಳಿ ವಿಶ್ರಾಂತಿ ಪಡೆಯುವರು.
ಮಧ್ಯಾಹ್ನ ೩:೪೫ಕ್ಕೆ ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡುವರು. ಸಂಜೆ ೪:೧೦ಕ್ಕೆ ಕೊಡಿಯಡ್ಕದ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ತೆರಳುವರು. ೪:೫೫ಕ್ಕೆ ಕಾರ್ಕಳದ ಅತಿಥಿ ಗೃಹಕ್ಕೆ ತೆರಳಿ ವಿಶ್ರಾಂತಿ ಪಡೆಯುವರು. ರಾತ್ರಿ ೮:೪೦ಕ್ಕೆ ಮಂಗಳೂರಿನ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿ ವಾಸ್ತವ್ಯ ಹೂಡುವರು.
ಮಾ.೧೫ರ ಬೆಳಗ್ಗೆ ೯ಕ್ಕೆ ವಿಮಾನದ ಮೂಲಕ ಹೊರಟು ೯:೫೫ಕ್ಕೆ ಬೆಂಗಳೂರು ತಲುಪುವರು ಎಂದು ರಾಜ್ಯಪಾಲರ ಎಡಿಸಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.