×
Ad

ಮಂಚಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ವತಿಯಿಂದ ರಕ್ತದಾನ ಶಿಬಿರ

Update: 2022-03-13 20:30 IST

ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮಂಚಿ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಇಂದು ಮಂಚಿಯ  ನೂಜಿಬೈಲು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಂಚಿ ಗ್ರಾಮ ಪಂಚಾಯತ್ ನ ಆಶಾ ಕಾರ್ಯಕರ್ತೆ ಪುಷ್ಪಲತಾ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ನ ಆಶಾ ಕಾರ್ಯಕರ್ತೆ ಗೀತಾ ಕೇಶವ್ ಇವರನ್ನು ಸನ್ಮಾನಿಸಲಾಯಿತು. 

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮಂಚಿ ಇದರ ಅಧ್ಯಕ್ಷ ಬಶೀರ್ ಎಂ.ಕೆ  ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು,  ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ  ಶ್ರೀ ನಾರಾಯಣ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಪಿಎಫ್ ಐ ಕಲ್ಲಡ್ಕ ಡಿವಿಷನ್ ಅಧ್ಯಕ್ಷ ಸಿದ್ದೀಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಗೈದರು, ನಿತ್ಯಾಧರ್ ಸಾಲೆತ್ತೂರು ಇದರ ಧರ್ಮಗುರುಗಳಾದ ಹೆಂಡ್ರಿ ಡಿಸೋಜಾ ,  ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಅಶ್ರಫ್ ಮಂಚಿ , ಅರಫಾ ಮಂಚಿ  , ಕಾಂಗ್ರೆಸ್ ಕೊಲ್ನಾಡು ಗ್ರಾಮ ಸಮಿತಿ ಅಧ್ಯಕ್ಷ ಖಾದರ್ ಮೂಸ ಹಾಗೂ  ನ್ಯಾಷನಲ್ ವಿಮೆನ್ಸ್ ಫ್ರಂಟ್ ಸದಸ್ಯೆ ಶಮೀಮಾ ಮರಿಯಂ ಹಳೆಯಂಗಡಿ ಕಾರ್ಯಕ್ರಮದಲ್ಲಿ ಮಾತನಾಡಿದರು

ಈ ಸಂದರ್ಭದಲ್ಲಿ ಶ್ರೀ ರಾಜೇಶ್ ಕೊಟ್ಟಾರಿ, ಮಹಮ್ಮದ್ ಕೋಕಲ, ‌ಎಂ.ಎ ಹನೀಫ್ ,ಫೈಝಲ್ ಮಂಚಿ ಅಬೂಬಕ್ಕರ್ ನಿರ್ಬೈಲು ಹಾಗೂ ಕೊಲ್ನಾಡು ಗ್ರಾಮ ಪಂಚಾಯತಿನ ಸದಸ್ಯರಾದ ಮಹಮ್ಮದ್ ಮಂಚಿ ಉಪಸ್ಥಿತರಿದ್ದರು ಅಲ್ಲದೆ ಸ್ಥಳೀಯ ಸಂಘ ಸಂಸ್ಥೆಗಳ ನಾಯಕರು ವೇದಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಡಿ.ಎನ್ ಫಾರೂಕ್ ಮಂಚಿ ಸ್ವಾಗತಿಸಿದರು.  ಇಕ್ಬಾಲ್ ಮಂಚಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News