ಕುಡುಬಿ ಸಮುದಾಯದಿಂದ ಹೊಳಿ ಆಚರಣೆಗೆ ಚಾಲನೆ
Update: 2022-03-14 17:42 IST
ಉಡುಪಿ : ಕುಡುಬಿ ಸಮುದಾಯದ ಹೊಳಿ ಆಚರಣೆಗೆ ಸೋಮ ವಾರ ಮುದ್ದುಮನೆ ಮೂಡುಗುಡ್ಡೆ ಹೊಳೆಜೆಡ್ಡು ಗುರಿಕಾರರ ಮನೆಯಲ್ಲಿ ಚಾಲನೆ ನೀಡಲಾಯಿತು.
ವೇಷಭೂಷಣಾ, ಗೆಜ್ಜೆ, ಗುಮ್ಮಟೆಯೊಂದಿಗೆ ಬೆಳಗಿನ ಜಾವಾ ಕೂಡುಕಟ್ಟಿನ ಸುಮಾರು ೭೫ ಮಂದಿ ಗುರಿಕಾರರ ಮನೆಗೆ ಬಂದು ಸೇರಿದ್ದು, ಗುರಿಕಾರರ ಮನೆಯಲ್ಲಿ ಪ್ರತಿಷ್ಠೆ, ಹಾಡುಗಳನ್ನು ಹಾಡಿ, ಹೋಳಿ ಹಬ್ಬದ ಸಂಪ್ರದಾಯದಂತೆ ಕೋಲಾಟ, ಗುಮ್ಮಾಟೆ, ನರ್ತನ ವನ್ನುಮಾಡಿ, ಹೊರ ಗ್ರಾಮಕ್ಕೆ ಹೋಗಲು ಚಾಲನೆಯನ್ನು ನೀಡಲಾಯಿತು.
ಅದರಂತೆ 5 ದಿನಗಳ ನಡೆಯುವ ಈ ಹೋಳಿಹಬ್ಬ ಆಚರಣೆಯ ಸದ್ಯಸರು ಗ್ರಾಮದಲ್ಲಿ ತಿರುಗಾಟ ಮಾಡಿ ಮಾ.18ರಂದು ಹೋಳಿ ಹುಣ್ಣಿಮೆ ದಿನ ಮತ್ತೆ ಎಲ್ಲಾ ಕೂಡು ಕಟ್ಟಿನ ಸದಸ್ಯರು ಗುರಿಕಾರರ ಮನೆಗೆ ಸೇರಿ ಈ ವರ್ಷದ ಕೊನೆಯ ಹೋಳಿ ಕುಣಿತ, ನರ್ತನಮಾಡಿ, ಗೆಜ್ಜೆ ವೇಷ ಭೂಷಣವನ್ನು ಕಳಚಿ ಎಲ್ಲರೂ ಸಾಮೂಹಿಕ ಸ್ನಾನ ಮಾಡುದರೊಂದಿಗೆ ಹೋಳಿ ಆಚರಣೆಯನ್ನು ಮುಕ್ತಾಯಗೊಳಿಸಲಿದ್ದಾರೆ.