×
Ad

ಹರೇಕಳ: ದಫನ ಭೂಮಿಗೆ ಬಿಯರ್‌ ಬಾಟಲ್‌ ಗಳನ್ನು ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು

Update: 2022-03-15 14:26 IST

ಕೊಣಾಜೆ: ಹರೇಕಳ ಆಲಡ್ಕ ಬದ್ರಿಯ ಜುಮಾ ಮಸೀದಿಯ ಬಳಿ ಇರುವ ದಫನ ಭೂಮಿಯ ಬಳಿ ದುಷ್ಜರ್ಮಿಗಳು ಬಿಯರ್ ಬಾಟ್ಲಿಗಳನ್ನು ಎಸೆದು ದುಷ್ಕೃತ್ಯ ಎಸಗಿರುವ ಘಟ‌ನೆ ಸೋಮವಾರ ತಡರಾತ್ರಿ ನಡೆದಿದ್ದು ಕೊಣಾಜೆ‌ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

ದಫನ ಭೂಮಿಯಲ್ಲಿ ಕಿಡಿಗೇಡಿಗಳು ಬಿಯರ್ ಬಾಟಲಿ ಹಾಗೂ ಮಾಂಸದ ತುಂಡುಗಳು ಪತ್ತೆಯಾಗಿವೆ. ಅಲ್ಲದೆ ದಫನ ಮಾಡುವ ಹೊಂಡಗಳು, ಹೂತಿಟ್ಟ ಕಲ್ಲುಗಳಿಗೂ ಹಾನಿಗೊಳಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿ ದ್ದಾರೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿದ್ದಾರೆ.

'ಹರೇಕಳ ಪ್ರದೇಶವು ಸೌಹಾರ್ದತೆಯ ಪ್ರದೇಶವಾಗಿದ್ದು ಇದನ್ನು ಹಾಳುಗೆಡವಲು ಇಂತಹ ದುಷ್ಕೃತ್ಯವನ್ನು ಎಸಗಿರಬಹುದು. ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಲ್ಲಿ ಒತ್ತಾಯಿಸುತ್ತೇವೆʼ ಎಂದು ಡಿವೈಎಫ್ ಐ ಮುಖಂಡ ರಫೀಕ್ ಹರೇಕಳ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News