×
Ad

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಉವೈಸಿ ಕಾರಣ: ಸತ್ಯಾಂಶವೇನು?

Update: 2022-03-15 23:34 IST

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಗೆಲುವಿಗೆ ಅಸಾದುದ್ದೀನ್‌ ಉವೈಸಿ ಅವರ ಎಐಎಮ್‌ಐಎಮ್‌ ಪಕ್ಷ ಕಾರಣ ಎಂಬಂತಹ ಸಂದೇಶಗಳು ಹರಿದಾಡುತ್ತಿವೆ. ಎಐಎಮ್‌ಐಎಮ್‌ ಪಕ್ಷವು ಮತ ವಿಭಜನೆ ಮಾಡಿ ಬಿಜೆಪಿ ಗೆಲುವಿಗೆ ಸಹಯ ಮಾಡಿದೆ ಎಂದು ಆರೋಪಿಸಲಾಗಿದೆ.

ಹರಿದಾಡುತ್ತಿರುವ ಪೋಸ್ಟ್‌ ಪ್ರಕಾರ, ʼಎಐಎಮ್‌ಐಎಮ್‌ 165 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 89 ಕ್ಷೇತ್ರಗಳಲ್ಲಿ ಕೇವಲ 2000 ಮತಗಳ ಅಂತರದಲ್ಲಿ ಬಿಜೆಪಿ ಗೆದ್ದಿದೆʼ ಎಂದು ಹೇಳಲಾಗಿದೆ.

 ಇದೇ ಅಂಕಿಅಂಶವನ್ನು ಆಧರಿಸಿ  The Times of IndiaDeccan Herald, Lokmat TimesSambad English ಹಾಗೂ ಹಲವು ಸುದ್ದಿ ವೆಬ್‌ಸೈಟ್‌ಗಳು ವರದಿ ಮಾಡಿದೆ ಎಂದು Altnews ವರದಿ ಮಾಡಿದೆ.

ಫ್ಯಾಕ್ಟ್‌ ಚೆಕ್

‌ ಈ ಪೋಸ್ಟ್‌ ನ ಸತ್ಯಾ ಸತ್ಯತೆಯನ್ನು ಆಲ್ಟ್‌ ನ್ಯೂಸ್‌ ಪರಿಶೀಲಿಸಿದ್ದು, ಚುನಾವಣಾ ಆಯೋಗದ ಅಧಿಕೃತ ಮಾಹಿತಿ  ಪ್ರಕಾರ ಉವೈಸಿ ಅವರ ಎಐಮ್‌ಐಎಮ್‌ ಪಕ್ಷವು ಉತ್ತರಪ್ರದೇಶದ 403 ಕ್ಷೇತ್ರಗಳ ಪೈಕಿ 96 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಅದರ ಪ್ರಕಾರ ಎಐಎಮ್‌ಐಎಮ್‌ 165 ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಆರೋಪವು ಸುಳ್ಳಾಗಿದೆ. ಇನ್ನು 2000 ಕ್ಕಿಂತಲೂ ಕಡಿಮೆ ಅಂತರದಲ್ಲಿ 86 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂಬ ಆರೋಪವೂ ಸುಳ್ಳಾಗಿದ್ದು, ವಾಸ್ತವದಲ್ಲಿ, ಕೇವಲ 29 ಕಡೆಗಳಲ್ಲಿ ಮಾತ್ರ ಗೆಲುವಿನ ಅಂತರ 2000 ಕ್ಕೂ ಕಡಿಮೆ ಇದೆ. 500 ಕಡಿಮೆ ಅಂತರದಲ್ಲಿ 11 ಕಡೆ ಗೆದ್ದರೆ, 500-1000 ಮತಗಳ ಅಂತರದಲ್ಲಿ 11 ಕಡೆ ಹಾಗೂ, 14 ಸ್ಥಾನಗಳಲ್ಲಿ ಗೆಲುವಿನ ಅಂತರ 1000-2000 ದ ನಡುವೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News