ಜಪಾನ್‌ ನಲ್ಲಿ ಭೀಕರ ಭೂಕಂಪ: ಸುನಾಮಿ ಕುರಿತು ಮುನ್ನೆಚ್ಚರಿಕೆ

Update: 2022-03-16 16:58 GMT
Photo; Twitter

ಟೋಕಿಯೋ: ಜಪಾನ್‌ನಲ್ಲಿ ಬುಧವಾರ ರಾತ್ರಿ 7.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಾಜಧಾನಿ ಟೋಕಿಯೊವನ್ನು ತಲ್ಲಣಗೊಳಿಸಿದೆ. ಈ ಭೂಕಂಪವು, ಈಶಾನ್ಯ ಕರಾವಳಿಯ ಕೆಲವು ಭಾಗಗಳಿಗೆ ಸುನಾಮಿ ಅಪ್ಪಳಿಸಲಿವೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.

ಭೂಕಂಪನದಿಂದ ಎರಡು ದಶಲಕ್ಷಕ್ಕೂ ಹೆಚ್ಚು ಮನೆಗಳ ವಿದ್ಯುತ್ ಕಡಿತಗೊಂಡಿದೆ. ಫುಕುಶಿಮಾ ಪ್ರದೇಶದ ಕರಾವಳಿಯಲ್ಲಿ 60 ಕಿಲೋಮೀಟರ್ (37 ಮೈಲುಗಳು) ಆಳದಲ್ಲಿ ಭೂಕಂಪವು ಕೇಂದ್ರೀಕೃತವಾಗಿತ್ತು.

ರಾತ್ರಿ 11:36 ಕ್ಕೆ ಅಪ್ಪಳಿಸಿದ ಸ್ವಲ್ಪ ಸಮಯದ ನಂತರ ಈಶಾನ್ಯ ಕರಾವಳಿಯ ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಭಾಗಗಳಲ್ಲಿ ಒಂದು ಮೀಟರ್ ವರೆಗೆ ಸಮುದ್ರದ ತೆರೆಯು ಮೇಲೆ ಏಳಬಹುದು ಎಂದು ಸುನಾಮಿ ಎಚ್ಚರಿಕೆಯನ್ನು  ಹವಾಮಾನ ಇಲಾಖೆ ನೀಡಿದೆ.


ಇದು 11 ವರ್ಷಗಳ ಹಿಂದೆ ಕಂಡ ಭೀಕರ ಭೂಕಂಪ ಮತ್ತು ಸುನಾಮಿಯಿಂದ ಧ್ವಂಸಗೊಂಡಿದ್ದ ಅದೇ ಪ್ರದೇಶದಲ್ಲಿ ಮತ್ತೆ ಭೂಕಂಪವಾಗಿದೆ. 2011 ರಲ್ಲಿ ಸಂಭವಿಸಿದ ಸುನಾಮಿ ಹಾಗೂ ಭೂಕಂಪದಿಂದ ಪರಮಾಣು ಸ್ಥಾವರಕ್ಕೂ ಹಾನಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News