×
Ad

ಹಿಜಾಬ್ ತೀರ್ಪು: ಆರೆಸ್ಸೆಸ್ ಪ್ರಭಾವ ಇದೆಯೆ?: ಕಾಂಗ್ರೆಸ್ ನಾಯಕ ಪಿ.ವಿ.ಮೋಹನ್ ಪ್ರಶ್ನೆ

Update: 2022-03-17 16:03 IST

ಮಂಗಳೂರು, ಮಾ.17: ತರಗತಿಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ವಿಚಾರವಾಗಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಬಾಲಿಶ ಎಂದು ಎಐಸಿಸಿ ಕಾರ್ಯದರ್ಶಿ, ಪಕ್ಷದ ಕೇರಳ ಉಸ್ತುವಾರಿ ಪಿ.ವಿ.ಮೋಹನ್ ಅಭಿಪ್ರಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಅತ್ಯಂತ ಸಂಕುಚಿತ ದೃಷ್ಟಿಕೋನವನ್ನಿಟ್ಟು ಬಾಲಿಶ ತೀರ್ಪನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದೆ ಎಂಬ ಪಬ್ಲಿಕ್ perception ಇದೆ. ಅದು ಸರಿಯಾಗಿದೆ ಅಂತ ಅನ್ನಿಸುತ್ತದೆ. ನ್ಯಾಯಮೂರ್ತಿಯವರು ಡ್ರೆಸ್ ಕೋಡ್ ಸಾಮರಸ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಹಕ್ಕುಗಳ ಬಗ್ಗೆ ಹೆಚ್ಚು ಮಾತಾಡದೆ ನೀತಿಯನ್ನು ಭೋದಿಸುತ್ತಾರೆ. ಆರೆಸ್ಸೆಸ್ ಪ್ರಭಾವ ಇದೆಯೆ?" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News