×
Ad

ಮಣಿಪಾಲ: ಕತ್ತಿಯಿಂದ ಕಡಿದು ಅಣ್ಣನ ಕೊಲೆ; ಆರೋಪಿ ತಮ್ಮನ ಬಂಧನ

Update: 2022-03-18 11:39 IST

ಮಣಿಪಾಲ, ಮಾ.18: ಮನೆಯ ವಾಸ್ತವ್ಯ ವಿಚಾರಕ್ಕೆ ಸಂಬಂಧಿಸಿ ಸಹೋದರರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಉಡುಪಿ ತಾಲೂಕಿನ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬಳಕಟ್ಟ ಎಂಬಲ್ಲಿ ಮಾ.16ರಂದು ಸಂಜೆ ನಡೆದಿರುವುದು ವರದಿಯಾಗಿದೆ.

ಕಂಬಳಕಟ್ಟ ನಿವಾಸಿ ಪಾಂಡು ನಾಯ್ಕ ಎಂಬವರ ಪುತ್ರ ಬಾಲಕೃಷ್ಣ(43) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿ ಬಾಲಕೃಷ್ಣರ ತಮ್ಮ ಆರೋಪಿ ದಯಾನಂದ(40)ನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಮನೆಯ ವಾಸ್ತವ್ಯದ ವಿಚಾರವಾಗಿ ಮಾ.16ರಂದು ಸಂಜೆ 6:30ರ ಸುಮಾರಿಗೆ ಬಾಲಕೃಷ್ಣ ಮತ್ತು ದಯಾನಂದನ ನಡುವೆ ಗಲಾಟೆ ನಡೆದಿದೆ. ಈ ವೇಳೆ ಬಾಲಕೃಷ್ಣರ ತಲೆಗೆ ಆರೋಪಿ ದಯಾನಂದ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವಗೊಂಡ ಬಾಲಕೃಷ್ಣ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News